Kalaburagi | ಹೀರಾಪೂರದಲ್ಲಿ 1 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

Update: 2026-07-29 20:03 IST

ಕಲಬುರಗಿ: ಮುಖ್ಯಮಂತ್ರಿ ವಿಶೇಷ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ಹೀರಾಪೂರ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಹೀರಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ಸಿಸಿ ಒಳ ರಸ್ತೆಗಳ ನಿರ್ಮಾಣ ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮುಖ್ಯ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿರಂತರವಾಗಿ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಮಗಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲಿಂಗರಾಜ ಕಣ್ಣಿ, ಶಿವಯೋಗಿ ದೊಡ್ಮನಿ, ಸುನಿಲ್ ಇನಾಮ್ದಾರ್, ಪರಮೇಶ್ವರ್ ಮೇಲಿನಮನಿ, ಉದಯಕುಮಾರ್ ಡಿಪ್ಟಿ, ಜಗನ್ನಾಥ್ ದಿಕ್ಸಂಗಿ, ಸಂತೋಷ್ ಮಿಲಿಮನಿ, ರಣಜಿ ಡಿಪ್ಟಿ, ಲಕ್ಷ್ಮಣ್ ಅಷ್ಟಗಿ, ಲಕ್ಷ್ಮಣ್ ಹತ್ತರಗಿ, ಅಶೋಕ್ ಸರಡಗಿ, ಸಿದ್ದಾರ್ಥ ದಿಕ್ಸಂಗಿ, ಮಹೇಶ್ ಕೆಲ್ಲೂರ್ಕರ್, ಅಶೋಕ್ ಮೇಲಿನಮನಿ, ಶರಣಗೌಡ ಬಿರಾದಾರ್, ಹನುಮಂತ ನಿಂಬರ್ಗಾ, ಸೂರ್ಯಕಾಂತ್ ಕಡೆಗಂಚಿ, ಸುನಿಲ್ ದಿಕ್ಸಂಗಿ, ಕುಸಮಾಕರ್ ಆರ್., ನಿಖಿಲ್ ನಾಗ, ತಿಲಕ್ ದೇವನೂರು, ಈರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News