×
Ad

ಅವಹೇಳನಕಾರಿ ಹೇಳಿಕೆ ಪ್ರಕರಣ; ಕಲಬುರಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ಷಮೆ ಕೋರುವೆ: ಎನ್.ರವಿಕುಮಾರ್

Update: 2025-06-02 19:57 IST

ಎನ್.ರವಿಕುಮಾರ್‌

ಕಲಬುರಗಿ: ಹೈಕೋರ್ಟ್ ಆದೇಶದಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ವೈಯಕ್ತಿಕವಾಗಿ ಪತ್ರ ಬರೆದು ಕ್ಷಮೆ ಕೇಳುವೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್‌ ಹೇಳಿದರು.

ನಗರದ ದಕ್ಷಿಣ ಎಸಿಪಿ ಕಚೇರಿಯಲ್ಲಿ ಅವಹೇಳನಕಾರಿ ಪದ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಸೂಚನೆ ನೀಡಿದ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗಿದ್ದೇನೆ, ನನ್ನನ್ನು ಬಂಧನ ಮಾಡಬಾರದು ಎಂದು ಕೋರ್ಟ್ ತಿಳಿಸಿದೆ. ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ನಾನು ವಿಚಾರಣೆ ಎದುರಿಸಿದ್ದೇನೆ ಎಂದರು.

ವಿಚಾರಣೆ ವೇಳೆ ನೀವು ಆ ರೀತಿ ಭಾಷಣ ಮಾಡಿದ್ದೀರಾ? ಎಂದು ಪೊಲೀಸರು ಕೇಳಿದರು. ಅದಕ್ಕೆ ನಾನು ಹೌದು ಎಂದು ಹೇಳಿದ್ದೇನೆ. ಆದರೆ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿದ್ದು ಆಶ್ಚರ್ಯವಾಗಿದೆ ಎಂದರು.

ದಲಿತರ ಅವಹೇಳನ ಮಾಡಿಲ್ಲ. ಅ ಬಗ್ಗೆ ವಿಡಿಯೋ ಕೂಡ ಇದೆ. ಜಿಲ್ಲಾಧಿಕಾರಿಗೂ ನಾನು ಬೈದಿಲ್ಲ. ಧರ್ಮದ ವಿಚಾರವಾಗಿ ನಾನು ಹೇಳಿಕೆ ನೀಡಿಲ್ಲ. ಪಾಕಿಸ್ತಾನ ದೇಶದ ಅರಾಜಕತೆಯ ದೃಷ್ಟಿ ಇಟ್ಟುಕೊಂಡು ಹೇಳಿದ್ದೇನೆ ಎಂದು ತನಿಖಾಧಿಕಾರಿಗೆ ತಿಳಿಸಿದ್ದೇನೆ. ಪ್ರಕರಣ ನ್ಯಾಯಲಯದಲ್ಲಿದೆ. ನ್ಯಾಯಾಂಗದ ಮೇಲೆ ನನಗೆ ಗೌರವವಿದೆ. ನಾನು ಹೇಳಿಕೆ ನೀಡಿದ ಮರುದಿನವೇ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದರು.

ತಿರಂಗಾಯಾತ್ರೆಗೆ ಬಂದವರಿಗೆ ದಿಗ್ಬಂಧನ ಹಾಕುವುದು, ದುರಾಡಳಿತ ವಿರುದ್ಧ ಮಾತನಾಡಿದವರ ವಿರುದ್ಧ ಕೇಸ್ ಹಾಕುವುದು ಸಿದ್ದರಾಮಯ್ಯ ಸರಕಾರದ ಕೆಲಸವಾಗಿದೆ. ಇದು ಒಂದು ಎಫ್ ಐ ಆರ್ ಸರಕಾರ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಎಂಎಲ್ಸಿ ಶಶೀಲ್ ನಮೋಶಿ, ಅಮರನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಅವ್ವಣ್ಣಾ ಮ್ಯಕೆರಿ, ಬಾಬುರಾವ್ ಚವ್ಹಾಣ್, ರಾಜು ವಾಡೇಕರ್, ಗಣೇಶ್ ತಳಕೇರಿ, ವಿದ್ಯಾಸಾಗರ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News