ಕಲಬುರಗಿ | ಸೆ.15 ರಂದು ವಿಭಾಗಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ
ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಕಲಬುರಗಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದ ಅಂಗವಾಗಿ ಅಥ್ಲೇಟಿಕ್ಸ್, ಬಾಸ್ಕೆಟ್‍ಬಾಲ್, ಹ್ಯಾಂಡ್ ಬಾಲ್, ಫುಟ್‌ಬಾಲ್, ಟೆನ್ನಿಸ್, ಈಜು ಹಾಗೂ ಜೂಡೋ ಕ್ರೀಡೆಗಳು ಸೆ.15 ರಂದು ಬೆಳಿಗ್ಗೆ 9 ಗಂಟೆಗೆ ಕೆಳಕಂಡ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಂತಹ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಿರುತ್ತಾರೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ-ಅಥ್ಲೇಟಿಕ್ಸ್, ಈಜು, ಜೂಡೋ, ಟೆನ್ನಿಸ್ ಕ್ರೀಡೆಗಳು.
ಕಲಬುರಗಿಯ ಹೈಕೋರ್ಟ್ ಹತ್ತಿರದ ಕೆ.ಹೆಚ್.ಬಿ. ಅಕ್ಕಮಹಾದೇವಿ ಕಾಲೋನಿಯ ಬಾಸ್ಕೆಟಬಾಲ್ ಕ್ರೀಡಾಂಗಣದಲ್ಲಿ- ಬಾಸ್ಕೆಟಬಾಲ್ ಕ್ರೀಡೆ.
ಕಲಬುರಗಿಯ ಹೆಚ್.ಕೆ.ಇ. ಪಾಲಿಟೆಕ್ನಿಕ್ ಕ್ರೀಡಾಂಗಣದಲ್ಲಿ-ಹ್ಯಾಂಡಬಾಲ್ ಕ್ರೀಡೆಯನ್ನು ಹಾಗೂ ಕಲಬುರಗಿಯ ವಿರೇಂದ್ರ ಪಾಟೀಲ ಬಡಾವಣೆಯ ಎಂ.ಬಿ ನಗರದ ಫುಟಬಾಲ್ ಅಂಕಣದಲ್ಲಿ-ಫುಟ್‌ಬಾಲ್ ಕ್ರೀಡೆಗಳು ನಡೆಯಲಿವೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ವಿಜೇತ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್‍ಲೈನ್ ನೋಂದಣಿ ಮಾಡಿರಬೇಕು ಎಂದು ಅವರು ತಿಳಿಸಿದ್ದಾರೆ.