×
Ad

ಕಲಬುರಗಿ: ಆಟೋಮೊಬೈಲ್‌ ಸರ್ವೀಸ್‌ ಸೆಂಟರ್‌ ನಲ್ಲಿ ಬೆಂಕಿ ಆಕಸ್ಮಿಕ: 10 ಬೈಕ್‌ಗಳು ಸುಟ್ಟು ಭಸ್ಮ

Update: 2024-01-29 15:00 IST

ಕಲಬುರಗಿ: ಆಟೋಮೊಬೈಲ್‌ ಸರ್ವೀಸ್‌ ಸೆಂಟರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 10 ಬೈಕ್‌ಗಳು ಸುಟ್ಟು ಕರಕಲಾದ ಘಟನೆ ನಗರದ ಫಿಲ್ಟರ್‌ ಬೆಡ್‌ ಏರಿಯಾದಲ್ಲಿ ಸೋಮವಾರ ನಡೆದಿದೆ.

ನಾಗೇಶ್‌ ಲಾಡೆ ಎಂಬವರಿಗೆ ಸೇರಿದ ಮಲ್ಲೇಶ್‌ ಆಟೋಮೊಬೈಲ್‌ ಸರ್ವೀಸ್‌ ಸೆಂಟರ್‌ನಲ್ಲಿ ಈ ಅಅನಾಹುತ ಸಂಭವಿಸಿದೆ. ನಾಗೇಶ್‌ ಲಾಡೆ ಅವರು ರವಿವಾರ ರಾತ್ರಿ ತಮ್ಮ ಕೆಲಸ ಮುಗಿಸಿ  ಅಂಗಡಿ ಬಂದ್‌ ಮಾಡಿ  ಹೋಗಿದ್ದರು. ಇಂದು ಮುಂಜಾನೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಗ್ರಾಹಕರು ಇರಿಸಿದ್ದ ಬೈಕ್‌ಗಳು ಸೇರಿ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಚೌಕ್‌ ಪೊಲೀಸ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News