×
Ad

ಕಲಬುರಗಿ | ಪಿಎಸ್ಐ ಗಂಗಮ್ಮ ವಿರುದ್ಧ ಜಾತಿ ನಿಂದನಾ ಪ್ರಕರಣ ದಾಖಲಿಸುವಂತೆ ಒತ್ತಾಯ

Update: 2025-01-20 16:32 IST

ಕಲಬುರಗಿ : ದಲಿತ ಸಮುದಾಯ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದಡಿ ಕಾಳಗಿ ತಾಲೂಕಿನ ರಟಕಲ್ ಪೊಲೀಸ್ ಠಾಣೆಯ ಪಿಎಸ್ಐ ಗಂಗಮ್ಮ ಅವರ ವಿರುದ್ಧ ಕೂಡಲೇ ಎಸ್. ಸಿ, ಎಸ್.ಟಿ ದೌರ್ಜನ್ಯ ತಡೆ 1989 ಸೆಕ್ಷನ್ 3ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ರಟಕಲ್ ವತಿಯಿಂದ ಕಾಳಗಿ ತಾಲೂಕು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಜನಸ್ನೇಹಿ ಪೊಲೀಸ್ ಇಲಾಖೆಯ ರಟಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಆರಕ್ಷಕ ಉಪನೀರಿಕ್ಷಕರಾದ ಗಂಗಮ್ಮ ಅವರು ಅಸಂವಿಧಾನಿಕ ಮಾತುಗಳನ್ನಾಡಿರೋದು ಬಯಲಾಗಿದೆ, ಅವರು ಈ ತರಹದ ಮಾತುಗಳು ಅಡಿರುವುದು ನಿಜಕ್ಕೂ ಅಸಹ್ಯ ಎನಿಸುತ್ತಿದೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಸಂವಿಧಾನಿಕ ಮಾತನಾಡುವವರ ಮೇಲೆ ಕಠಿಣ ಶಿಕ್ಷೆಗೆ ಗುರಿಯಾಗುವಂತಹ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿ, ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ರಟಕಲ್ ಗ್ರಾಮದಲ್ಲಿ ಹೋರಾಟ ಮಾಡಿ ಕಾಳಗಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ ಕಾಶಿನಾಥ್ ಶೆಳ್ಳಗಿ, ಕಲ್ಲಾಣರಾವ ತಳಕೇರಿ, ನಾಗರಾಜ್ ಬೇವಿನ್ಕರ್, ವಿಜಯಕುಮಾರ ಜಿಡಗಿ, ಮಾರುತಿ ಜಾಧವ್, ಮಲ್ಲಿಕಾರ್ಜುನ ಹಿಪ್ಪರ್ಗಿ, ದೇವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News