ಕಲಬುರಗಿ | ಬಸವೇಶ್ವರ ಆಸ್ಪತ್ರೆಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ
ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ಸೊನ್ನದ ಸಿದ್ಧಲಿಂಗೇಶ್ವರ ವಿರಕ್ತ ಮಠದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ಶಿಬಿರದ ನೇತೃತ್ವವನ್ನು ನೇತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಮಂಜುಳಾ ಮಂಗಾಣೆ ವಹಿಸಿದ್ದರು. ಈ ಶಿಬಿರದಲ್ಲಿ ನೇತ್ರ ತಜ್ಞರಾದ ಡಾ.ಎಂ.ಆರ್.ಪೂಜಾರಿ, ಡಾ.ರಾಜಶ್ರೀ ರೆಡ್ಡಿ, ಡಾ.ಕವಿತಾ ಸಲಗರ, ಡಾ.ಸುಮಿತ್ ದೇಶಪಾಂಡೆ, ಡಾ.ವೀರೇಶ್ ಕೊರವಾರ, ಡಾ.ಅಂಬಿಕಾ ಪಾಟೀಲ್, ಡಾ.ಶಶಾಂಕ್ ಸಜ್ಜನ ಶೆಟ್ಟಿ, ಡಾ. ರಹೀಲಾ ಆಪ್ಸಾನ್, ಡಾ.ನಾಗವೇಣಿ ಗುಬ್ಬೆವಾಡ, ಡಾ.ಅಮೃತಾ ಹಾವೆ ಭಾಗವಹಿಸಿ ಚಿಕಿತ್ಸೆ ನೀಡಿದರು.
ಶಿಬಿರದಲ್ಲಿ 200 ಜನರ ಸದುಪಯೋಗ ಪಡೆದುಕೊಂಡರು. 55 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ನೀಡಬೇಕಾಗಿದ್ದು, ಇವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ನೇತ್ರ ಚಿಕಿತ್ಸೆಯ ಸಂದರ್ಭದಲ್ಲಿ ನೇತ್ರ ರೋಗಿಗಳಿಗೆ ಅವಶ್ಯಕತೆ ಇರುವ ಕಣ್ಣಿನ ಔಷಧಿ, ಕಪ್ಪು ಕನ್ನಡಕ, ಮಾತ್ರೆಗಳನ್ನು ಉಚಿತವಾಗಿ ನೀಡಲಾಯಿತು.
ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ವೈದ್ಯಾಧಿಕಾರಿಗಳಾದ ಡಾ.ಆನಂದ ಗಾರಂಪಳ್ಳಿ, ಡಾ.ವಿಜಯಕುಮಾರ್ ಕಪ್ಪಿಕೇರಿ, ಆಡಳಿತಾಧಿಕಾರಿ ಡಾ.ಎಂ ಆರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.