ಕಲಬುರಗಿ | ಸರಕಾರಿ ಅಂಧಬಾಲಕರ ವಸತಿ ಶಾಲೆಗೆ ಉತ್ತಮ ಫಲಿತಾಂಶ
Update: 2025-05-03 11:47 IST
ಕಲಬುರಗಿ: ನಗರದ ಸರಕಾರಿ ಅಂಧಬಾಲಕರ ವಸತಿ ಶಾಲೆಯ 12 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹಾಗೂ ಶಾಲೆಯ ಪ್ರಭಾರಿ ಪ್ರಾಂಶುಪಾಲರಾದ ಸಾದಿಕ್ ಹುಸೇನ್ ಖಾನ್ ತಿಳಿಸಿದ್ದಾರೆ.
ರಾಕೇಶ್ ಭಜಂತ್ರಿ ಪ್ರಥಮ 476 76.16%, ಮಶಾಕ್ ಪಾಶಾ 426 68.16%, ಲಕ್ಷ್ಮೀಕಾಂತ್ 409 65.44%, ಅಯ್ಯಣ್ಣ 375.60%, ಲಕ್ಷ್ಮಣ್ ಸವಣೂರ 349 55.84%, ಮಲಕಣ್ಣ ವಡೋಡಗಿ 336 53.76%, ಬಾಸು 326 52.16% ಉತ್ತೀರ್ಣರಾದ ವಿದ್ಯಾರ್ಥಿಗಳು.
ಶಾಲೆಯ ಒಟ್ಟು 12 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 7 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಸಾದಿಕ್ ಹುಸೇನ್ ಖಾನ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.