×
Ad

ಕಲಬುರಗಿ | ಕೈದಿಗಳಿಗೆ ರಾಜಾತಿಥ್ಯ ಪ್ರಕರಣ : ಕೇಂದ್ರ ಕಾರಾಗೃಹದಲ್ಲಿನ ಆರು ಮಂದಿ ಕೈದಿಗಳ ಸ್ಥಳಾಂತರ

Update: 2024-12-06 16:58 IST

ಕಲಬುರಗಿ ಕೇಂದ್ರ ಕಾರಾಗೃಹ

ಕಲಬುರಗಿ : ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ, ಸೂಪರಿಡೆಂಟ್‌ಗೆ ಜೀವ ಬೆದರಿಕೆ ಪ್ರಕರಣದ ಹಿನ್ನಲೆ ಕೇಂದ್ರ ಕಾರಾಗೃಹದಿಂದ ಆರು ಕೈದಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಿರುವುದಾಗಿ ವರದಿಯಾಗಿದೆ.

2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಜುಲ್ಫಿಕರ್, ರೌಡಿ ಶೀಟರ್ ಬಚ್ಚನ್ ಸೇರಿ ಆರು ಮಂದಿ ಕೈದಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಎನ್‌ಐಎ ಕೋರ್ಟ್‌ನ ಅನುಮತಿ ಮೇರೆಗೆ ಆರೋಪಿ ಜುಲ್ಫಿಕರ್ ನನ್ನು ಸ್ಥಳಾಂತರ ಮಾಡಲಾಗಿದ್ದು, ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಶಿವಮೊಗ್ಗ ಕೋರ್ಟ್ ಅನುಮತಿ ಮೇರೆಗೆ ಗುರುವಾರ ಸ್ಥಳಾಂತರ ಮಾಡಲಾಗಿದೆ. ಉಳಿದ 4 ಕೈದಿಗಳನ್ನು ಆಯಾ ಕೋರ್ಟ್ ಮತ್ತು ಕಾರಾಗೃಹ ಇಲಾಖೆಯ ನಿರ್ಣಯದ ಮೇರೆಗೆ ಸ್ಥಳಾಂತರ ಮಾಡಲಾಗಿದೆ.

ಜಮೀರ್ ಅಲಿಯಾಸ್ ಬಚ್ಚನ್ ನನ್ನು ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ, ಅಬ್ದುಲ್ ಖಾದರ್ ಜಿಲಾನಿಯನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ, ಜುಲ್ಫಿಕರ್ ಧಾರವಾಡ ಕೇಂದ್ರ ಕಾರಾಗೃಹಕ್ಕೆ, ಶೇಖ್ ಸದ್ದಾಂ ಹುಸೇನ್‌ ಹಾಗೂ ಜಾಕೀರ್ ಹನೀಫ್ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ, ವಿಶಾಲ್ ರಾಥೋಡ್ ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News