ಕಲಬುರಗಿ: ಮಹಿಳಾ ಹಾಸ್ಟಲ್ ನಲ್ಲಿ ಕ್ಯಾಮೆರಾ ಅಳವಡಿಕೆ: ಆರೋಪಿ ಬಂಧನ
Kalaburagi: Installation of camera in women's hostel: Accused arrested
Update: 2023-12-20 17:23 IST
ಕಲಬುರಗಿ: ಜೇವರ್ಗಿಯ ಶಾಂತನಗರದಲ್ಲಿ ಅಲ್ಪಸಂಖ್ಯಾತರ ಹಾಸ್ಟಲ್ ನಲ್ಲಿ ಕ್ಯಾಮರಾ ಅಳವಡಿಸಿದ ಘಟನೆ ಬುಧವಾರ ಬೆಳಕಿಗ್ಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಾಂತನಗರದ ನಿವಾಸಿ ಸಲೀಮ್ ಎಂದು ಗುರುತಿಸಲಾಗಿದ್ದು, ಆರೋಪಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ ವೇಳೆ ಹಾಸ್ಟಲ್ ಗೊಡೆಯ ಪೈಪ್ ಮೂಲಕ ಕ್ಯಾಮರಾ ಅಳವಡಿಸಿದ್ದ ಎನ್ನಲಾಗುತ್ತಿದ್ದು, ಬೆಳಿಗ್ಗೆ ಹಾಸ್ಟಲ್ ವಿದ್ಯಾರ್ಥಿನಿಯರು ಎಂದಿನಂತೆ ಸ್ನಾನಕ್ಕೆ ತೆರಳಿದಾಗ ಕ್ಯಾಮರಾ ಇಟ್ಟಿರುವುದು ಕಂಡು ತಕ್ಷಣ ವಿದ್ಯಾರ್ಥಿನಿಯರು ಹಾಸ್ಟಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಜೇವರ್ಗಿ ತಹಶೀಲ್ದಾರ್ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ನಂತರ ಆರೋಪಿ ಸಲೀಮ್ ರನ್ನು ಪೊಲೀಸರು ಬಂಧಿಸಿದ್ದಾರೆ.