×
Ad

ಕಲಬುರಗಿ | ಜಮಾಅತೆ ಇಸ್ಲಾಮೀ ಹಿಂದ್, ಹೆಚ್.ಆರ್.ಎಸ್ ತಂಡದಿಂದ ಆಹಾರ ಕಿಟ್ ವಿತರಣೆ

Update: 2025-10-02 20:35 IST

ಕಲಬುರಗಿ: ಭೀಮಾ ನದಿ ಪ್ರವಾಹದಿಂದಾಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದರವಾಡ ಸೇರಿದಂತೆ ಹಲವು ನದೀತೀರದ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿರುವ ಹಿನ್ನೆಲೆ ನೆರೆ ಸಂತ್ರಸ್ತರಿಗೆ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಹೆಚ್.ಆರ್.ಎಸ್. ತಂಡದಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಹೆಚ್.ಆರ್.ಎಸ್. ಪ್ರಾಥಮಿಕ ಸಮೀಕ್ಷೆ ನಡೆಸಿ ಮೊದಲ ಹಂತದಲ್ಲೇ ಹೈವೆಯಲ್ಲಿ ನಿಂತಿದ್ದ ವಾಹನಗಳ ನಿರ್ವಾಹಕರಿಗೆ ಆಹಾರ ಪೊಟ್ಟಣಗಳನ್ನು ಒದಗಿಸಿದೆ. ಅಲ್ಲದೆ ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ಹಂಚಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕರಾದ ಮಿನಾಜುದ್ದೀನ್, ಜೇವರ್ಗಿ ತಾಲೂಕು ಕಾರ್ಯಕರ್ತ ಅಝೀಝ್ ಪಟೇಲ್, ಹೆಚ್.ಆರ್.ಎಸ್. ತಂಡದ ಸ್ವಯಂಸೇವಕರು ಹಾಗೂ ಇತರರು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News