×
Ad

ಕಲಬುರಗಿ | ಜೂ.5 ರಂದು ಜೇವರ್ಗಿಯಲ್ಲಿ ಉದ್ಯೋಗ ಮೇಳ

Update: 2025-06-04 19:11 IST

ಕಲಬುರಗಿ : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಜೇವರ್ಗಿ ಸರ್ಕಾರಿ ಐಟಿಐ ಕಾಲೇಜು ವತಿಯಿಂದ ಜೂ.5ರಂದು ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜೇವರ್ಗಿಯ ಶಹಾಪೂರ ರಸ್ತೆಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಟ್ಯಾಲಿ ಸಲ್ಯೂಷನ್‍ದಲ್ಲಿ ಸೆಲ್ಸ್ ಎಕ್ಸಿಕ್ಯೊಟಿವ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಭಾರತ ಫೈನಾನ್ಸ್ ನಲ್ಲಿ ಟೇಲಿಕಾಲರ್ (ಮಹಿಳೆ) ಹುದ್ದೆ ಮತ್ತು ಸೆಲ್ಸ್ ಎಕ್ಸಿಕ್ಯೊಟಿವ್ ಹುದ್ದೆಗಳಿಗೆ ಪಿಯುಸಿ/ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಎಲ್.ಐ.ಸಿ. ದಲ್ಲಿ ಕರಿಯರ್ ಏಜೆಂಟ್ (ಮಹಿಳೆ) ಹುದ್ದೆಗೆ ಪಿಯುಸಿ/ ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ಝುಮ್‍ಟೇಕ್ ಐಜಿ ದಲ್ಲಿ ವಿವಿಧ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ/ಡಿಪ್ಲೋಮಾ/ಯಾವುದೇ ಪದವಿ/ ಎಮ್.ಬಿ.ಎ /ಬಿ.ಇ./ ಬಿ.ಟೇಕ್/ಬಿ.ಫಾರ್ಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ವಿ5 ಗ್ಲೋಬಲ್ (ಎಮ್.ಆರ್.ಎಫ್. ಟೈರ್ಸ್) ದಲ್ಲಿ ಅಪ್ರೆಂಟಿಶಿಫ್ (ಟ್ರೈನಿ) ಹುದ್ದೆಗೆ ಎಸೆಸೆಲ್ಸಿ/ಪಿಯುಸಿ/ಐಟಿಐ/ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು. ಮೂತ್ತೂಟ್ ಫೈನಾನ್ಸ್ ನಲ್ಲಿ ಇಂಟರ್ನಲ್ ಟ್ರೈನಿ ಅಸೋಸಿಯಟ್ಸ್ ಹುದ್ದೆಗೆ ಯಾವುದೇ ಪದವಿ ಹಾಗೂ ಪ್ರೋಬೇಷನರಿ ಆಫೀಸರ್ ಹುದ್ದೆಗೆ ಬಿ.ಕಾಂ., ಎಮ್.ಕಾಂ. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು.

ಫ್ಲಿಪ್‍ ಕಾರ್ಟ್ ನಲ್ಲಿ ಡೆಲಿವರಿ ಎಕ್ಸಿಕ್ಯೊಟಿವ್ ಹುದ್ದೆ ಮತ್ತು ಹಬ್ ಸ್ಟೋರರ್ ಹುದ್ದೆಗಳಿಗೆ ಎಸೆಸೆಲ್ಸಿ/ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 38 ವರ್ಷದೊಳಗಿರಬೇಕು. ಟಾಟಾ ಎಲೆಕ್ಟ್ರಾನಿಕ್ಸ್ (ಟೆಂಟಾ ವಿಟಾ)ದಲ್ಲಿ ಟ್ರೈನಿ ಹುದ್ದೆಗೆ ಬಿ.ಇ., ಬಿ.ಟೇಕ್ (ಇಇಇ/ಇಸಿಇ/ಸಿಎಸ್‍ಸಿ/ ಮೆಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು. ಸ್ವತಂತ್ರ ಮೈಕ್ರೋ ಫೈನಾನ್ಸ್ ನಲ್ಲಿ ಕಲೆಕ್ಷನ್ ಆಫೀಸರ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 28 ವರ್ಷದೊಳಗಿರಬೇಕು.

ಸ್ಪಂದನಾ ಸ್ಫೂರ್ತಿ ಫೈನಾನ್ಸ್‍ದಲ್ಲಿ ಫಿಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ/ ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 19 ರಿಂದ 27 ವರ್ಷದೊಳಗಿರಬೇಕು. ರಿಲಿಯಾನ್ಸ್ ನಿಪೋನ್ ಲೈಫ್ ಇನ್ಸೂರೆನ್ಸ್‍ದಲ್ಲಿ ಲೈಫ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 30 ರಿಂದ 45 ವರ್ಷದೊಳಗಿರಬೇಕು. ರಿಲಿಯಾನ್ಸ್ ನಿಪೋನ್ ಲೈಫ್ ಇನ್ಸೂರೆನ್ಸ್‍ದಲ್ಲಿ ಲೈಫ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ (ಮಹಿಳಾ ಅಭ್ಯರ್ಥಿಗಳು ಮಾತ್ರ) ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 30-45 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್‍ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಬೇಕು.

ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270ಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News