×
Ad

ದೇಶ ಕಾಯುವ ಸೈನಿಕರೇ ದೇಶದ ಆಸ್ತಿ: ಪ್ರೊ.ಸಿದ್ದಪ್ಪ ಎಸ್.ಕಾಂತ

Update: 2025-12-04 22:30 IST

ಕಲಬುರಗಿ: `ದೇಶದ ಗಡಿ ಕಾಯುವ ಸೈನಿಕರು ದೇಶದ ಆಸ್ತಿ. ದೇಶ ಸೇವೆಗೆ ಸೈನಿಕ ಹುದ್ದೆ ಅಪರೂಪದ ಅವಕಾಶ. ಅಂತಹ ಸೈನಿಕ ಹುದ್ದೆಗೆ ಆಯ್ಕೆಯಾಗಲು ಸದೃಢ ದೇಹ ಸದೃಢ ಮನಸ್ಸು ಬೇಕಾಗುತ್ತದೆ’ ಎಂದು ಪ್ರೊ.ಸಿದ್ದಪ್ಪ ಎಸ್.ಕಾಂತ ಅಭಿಪ್ರಾಯಪಟ್ಟರು.

ನಗರದ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾರತದ ಸೈನ್ಯಕ್ಕೆ ಕ್ರೀಡಾ ಕೋಟದಲ್ಲಿ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿ ಪವನ್ ಬಲಿರಾಮ ಚವ್ಹಾಣ್ ಅವರನ್ನು ಸನ್ಮಾನಿಸಿ ಮಾತನಾಡಿದ  ಪ್ರೊ.ಸಿದ್ದಪ್ಪ, ಪವನ್ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾನೆ ಎಂದು ಹೇಳಿದರು.

ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದ ಡಾ.ಕರಿಬಸಪ್ಪ ಅವರು ಮಾತನಾಡಿ, ಕ್ರೀಡೆ ಉದ್ಯೋಗ ದೊರಕಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಪವನ್ ನಿದರ್ಶನ ಎಂದು ಹೇಳಿದರು.  

ಸೈನ್ಯಕ್ಕೆ ಆಯ್ಕೆಯಾದ ವಿದ್ಯಾರ್ಥಿ ಪವನ್ ಮಾತನಾಡಿ ತನ್ನ ಬಡತನದ ಹಿನ್ನೆಲೆ ಮತ್ತು ಕಠಿಣ ಶ್ರಮ ಮತ್ತು ಕಾಲೇಜಿನ ಅಧ್ಯಾಪಕರ ಪ್ರೋತ್ಸಾಹವೇ ಈ ಆಯ್ಕೆಗೆ ಕಾರಣ ಎಂದು ಕಾಲೇಜಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಸಿದ್ದಾರ್ಥ ಮದನಕರ್, ಪ್ರಾಧ್ಯಾಪಕರಾದ ಡಾ.ಸುದರ್ಶನ್ ಮದನಕರ್, ಡಾ.ಅರುಣ್ ಜೋಳದಕೂಡ್ಲಿಗಿ, ಡಾ. ನಿರ್ಮಲ ಸಿರಗಾಪುರ, ಡಾ.ವಸಂತ ನಾಸಿ, ಡಾ.ದತ್ತೂರಾಯ, ಡಾ.ಶಿವಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಡಿತ ಮದನಕರ್ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News