×
Ad

ವಿದ್ಯಾರ್ಥಿಗಳು ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು : ಡಾ. ಸುಭಾಷ್‌ ಚಂದ್ರ ದೊಡ್ಡಮನಿ

Update: 2025-12-04 22:45 IST

ಕಲಬುರಗಿ : ವಿದ್ಯಾರ್ಥಿ ಜೀವನ ಶ್ರೇಷ್ಟ ಜೀವನ ಎಷ್ಟೇ ಓದಿದರು ಕಡಿಮೆಯೇ, ಕಾರಣ ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಿ ಎಂದು ಶ್ರೀಮತಿ ವೀರಮ್ಮಗಂಗಸಿರಿ ಮಹಿಳ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸುಭಾಷ ಚಂದ್ರ ದೊಡ್ಡಮನಿ ಹೇಳಿದರು.

ನಗರದ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಕಲಬುರಗಿಯ ಪ್ರತಿಷ್ಠಿತ "ಕಾಯಕ ರತ್ನ" ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಬರಿ ಅಂಕಗಳಿಗಾಗಿ ಮಾತ್ರ ಓದದೆ ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಕೌಶಲ್ಯಯುತ ಶಿಕ್ಷಣದಿಂದ ಒಂದಿಷ್ಟು ಸಂಪಾದನೆ ಮಾಡಿದರೆ ತಂದೆ ತಾಯಿಯರಿಗೂ ಸಹಾಯ ಮಾಡಿದಂತಾಗುತ್ತದೆ ಎಂದರು.

ನಾವು ಮಾಡುವ ಕೆಲಸವೇ ಆಗಿರಲಿ ಶಿಕ್ಷಣವೇ ಆಗಿರಲಿ ಛಲದಿಂದ ಮಾಡಿ, ಜೀವನದಲ್ಲಿ ಉನ್ನತವಾದ ಗುರಿಯನ್ನು ಇಟ್ಟು ಅದನ್ನು ಮುಟ್ಟಲು ಕಠಿಣ ಪರಿಶ್ರಮದಿಂದ ಓದಿನ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಂದೆ ತಾಯಿಯರು ಕಷ್ಟ ಪಟ್ಟು ಶಾಲೆ, ಕಾಲೇಜಿಗೆ ಕಳಿಸಿರುತ್ತಾರೆ ಅವರ ಭರವಸೆಯನ್ನು ಹುಸಿಗೊಳಿಸದೆ ಶ್ರಮ ಪಡಿ ಎಂದರು. ಸಧ್ಯಕ್ಕೆ ಸಾಮಾಜಿಜ ಜಾಲತಾಣಗಳ  ಕಾಲವಾಗಿದ್ದು, ಅನಾವಶ್ಯಕ ರೀಲ್ಸ್ ನೋಡಲು ಮೊಬೈಲ್ ಬಳಸದೆ ಅದರಿಂದ ಉಪಯೋಗವಾಗುವಂತಹವುಗಳನ್ನೆ ನೋಡಿ ನಿಮ್ಮ ಜೀವನ ಉಜ್ವಲಗೊಳಿಸಿಕೊಳ್ಳಿ ಎಂದರು.

ಬರಿ ಓದಿನಿಂದ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ತಂದೆ ತಾಯಿಯರ ಹೆಸರಿಗೆ ಕಳಂಕ ಬರದಂತೆ ಜೀವನ ಸಾಗಿಸಿ ಎಂದರು. ಸಾಧಕರ ಜೀವನ ಚರಿತ್ರೆಯನ್ನು ಓದಿ ಪ್ರೇರಣೆಯನ್ನು ಪಡೆದುಕೊಂಡು ಮುಂದೆ ಸಾಗಿ ಎಂದ ತಿಳಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಮಾತನಾಡಿ, ನಮ್ಮ ಸಾಧನೆಯ ಹಾದಿಯಲ್ಲಿ ನಿಂದಕರು ಇದ್ದೇ ಇರುತ್ತಾರೆ. ಅದನ್ನು ಕಿವಿಗೆ ಹಾಕಿಕೊಳ್ಳದೆ ಮುಂದೆ ಸಾಗಿ ಎಂದರು. ತಂದೆ ತಾಯಿಯರು ಕಷ್ಟ ಪಟ್ಟು ಶಿಕ್ಷಣ ಕಲಿಸಲು ಕಳಿಸಿರುವಾಗ ಅವರ ಆಸೆ, ಭರವಸೆಯನ್ನು ಹುಸಿಗೊಳಿಸದೆ ಸಾಧನೆ ಕಡೆಗೆ ಹೆಚ್ಚು ಗಮನ ಕೊಡಲು ಸಲಹೆ ನೀಡಿದರು.

ವೇದಿಕೆ ಮೇಲೆ ಆರಾಧನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚೇತನಕುಮಾರ ಗಾಂಗಜಿ, ಕಸಾಪ ಉತ್ತರ ವಲಯ ಕಾರ್ಯದರ್ಶಿಗಳಾದ ಹಣಮಂತರಾಯ ದಿಂಡೂರೆ, ಅರ್ಥಶಾಸ್ತ್ರ ಉಪನ್ಯಾಸಕರಾದ ಕಾಶಿನಾಥ ಪಾಟೀಲ್‌, ಸಾಯಿಕುಮಾರ ಕಲ್ಲೂರ, ಕಾಲೇಜಿನ ಅಧ್ಯಕ್ಷರಾದ ಡಾ.ಅಂಬಾರಾಯ ಹಾಗರಗಿ, ಪ್ರಾಂಶುಪಾಲರಾದ ನಾಗೇಶ ತಿಮ್ಮಾಜಿ, ಎನ್.ಎಸ್. ಎಸ್. ಅಧಿಕಾರಿ ರಾಜೇಶ್ವರಿ ಪಾಟೀಲ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News