ಕಲಬುರಗಿ | ಬಿಹಾರ್ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ತಂಡ ಆಯ್ಕೆ
ಕಲಬುರಗಿ : ಬಿಹಾರ್ ರಾಜ್ಯದಲ್ಲಿ ಮಾ.26 ರಿಂದ 30 ರವರೆಗೆ ನಡೆಯಲಿರುವ 46ನೇ ಹೆಚ್.ಎಫ್.ಐ ಜೂನಿಯರ್ ಬಾಲಕರ ರಾಷ್ಟ್ರಮಟ್ಟದ ಹ್ಯಾಂಡಲ್ ಚಾಂಪಿಯನ್ ಶಿಪ್‍ಗೆ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.
ಗುಲ್ಬರ್ಗ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದಲ್ಲಿ ಭಾನುವಾರ ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಹ್ಯಾಂಡ್ ಬಾಲ್ ಅಂಕಣದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರಾದ ಚಾಂದ್ ಪಾಷಾ ಮುಲ್ಲಾ, ಕೊಪ್ಪಳ ಜಿಲ್ಲೆ ಉಮೇಶ್ ಶರ್ಮಾ, ಸಂತೋಷ್ ಬಾವಿಮನಿ ಸಂಜು ಕಟ್ಕೆ ಅವರಿಂದ ನೆರವೇರಿತು.
ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಕ್ರೀಡಾಪಟುಗಳಿಗೆ ಗುಲ್ಬರ್ಗ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಈರಣ್ಣ ಪಾಟೀಲ್ ಜಳಕಿ, ಕಾರ್ಯದರ್ಶಿ ದತ್ತಾತ್ರೆಯ ಕೆ ಜೇವರ್ಗಿ ಮತ್ತು ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಮೃತ ಅಷ್ಟಗಿ ಅಭ್ಯರ್ಥಿಗಳಿಗೆ ಶುಭಕೋರಿದರು.