×
Ad

ಕಲಬುರಗಿ: ಕೆಕೆಆರ್‌ಟಿಸಿ ನಿರ್ವಾಹಕನ ಮೇಲೆ ಹಲ್ಲೆ; ಪ್ರಕರಣ ದಾಖಲು

Update: 2025-06-28 12:00 IST

ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ಕಂಡಕ್ಟರ್‌ಗೆ ಸಹ ಪ್ರಯಾಣಿಕರು ಉಪಚರಿಸುತ್ತರುವುದು

ಕಲಬುರಗಿ: ಆಧಾರ್‌ಕಾರ್ಡ್ ಕೇಳಿದ್ದಕ್ಕೆ ಬಸ್ ಕಂಡಕ್ಟ‌ರ್ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

ಅರ್ಜುನ್‌ ಕಟ್ಟಿಮನಿ ಹಲ್ಲೆಗೆ ಒಳಗಾದ ನಿರ್ವಾಹಕ.

ಯಾದಗಿರಿಯಿಂದ ಕಲಬುರಗಿಗೆ ಬರುತ್ತಿದ್ದ ಕೆಕೆಆರ್‌ಟಿಸಿ ಬಸ್‌ಗೆ ವಾಡಿ ಬಳಿಯ ರಾವೂರನಲ್ಲಿ ಹತ್ತಿದ ಮಹಿಳೆ ಬೇರೆಯವರ ಆಧಾರ ಕಾರ್ಡ್ ತೋರಿಸಿ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾಳೆ. ಆಧಾರ್ ಕಾರ್ಡ್ ನಿಮ್ಮದಲ್ಲ. ಹಣ ಕೊಡಿ ಇಲ್ಲವೇ ಕೆಳಗಿಳಿಯಿರಿ ಎಂದು ಕಂಡಕ್ಟರ್‌ ಹೇಳಿದ್ದಾರೆ. ಈ ವೇಳೆಯಲ್ಲೇ ಮಹಿಳೆ ಮತ್ತು ಕಂಡಕ್ಟರ್‌ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಮಹಿಳೆ ಫೋನ್ ಮಾಡಿ ತನ್ನ ಸಂಬಂಧಿಕರನ್ನು ಕರೆಸಿ ಕಂಡಕ್ಟ‌ರ್ ಮೇಲೆ ಹಲ್ಲೆ ಮಾಡಿಸಿದ್ದು, ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ಕಂಡಕ್ಟರ್‌ಗೆ ಸಹ ಪ್ರಯಾಣಿಕರು ಉಪಚರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಕಂಡಕ್ಟರ್ ಅರ್ಜುನ ಕಟ್ಟಿಮನಿ ದೂರಿನ ಮೇರೆಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News