×
Ad

ಕಲಬುರಗಿ | 'ಯುವನಿಧಿ ವಿಶೇಷ ನೋಂದಣಿ' ಅಭಿಯಾನಕ್ಕೆ ಚಾಲನೆ

Update: 2025-01-06 20:13 IST

ಕಲಬುರಗಿ : ಕೂಸನೂರ್ ರಸ್ತೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ 'ಯುವನಿಧಿ ವಿಶೇಷ ನೋಂದಣಿ' ಅಭಿಯಾನ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಈ ಯೋಜನೆಗೆ 2023-24 ರಲ್ಲಿ ಸ್ನಾತಕ/ಸ್ನಾತಕೋತ್ತರ ಮತ್ತು ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು 6 ತಿಂಗಳ ಅವಧಿಯವರೆಗೆ ಉದ್ಯೋಗ ಹೊಂದಿಲ್ಲದವರು ನೊಂದಣಿ ಮಾಡಿಕೊಳ್ಳಬೇಕು. ಪದವಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂ. ನಿರುದ್ಯೋಗ ಭತ್ಯೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಯುವನಿಧಿ ವಿಶೇಷ ನೊಂದಣಿ ಅಭಿಯಾನವನ್ನು ಜ.6 ರಿಂದ ಜ.20 ರವರೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಕೌನ್ಸಿಲರ್ ಸತೀಶ ಕುಮಾರ ಹಾಗೂ ಕಲಬುರಗಿಯ ಯುವ ಪ್ರೊಫೆಷನ್ ಮಾದರಿ ವೃತ್ತಿ ಕೇಂದ್ರದ ಪಿಯುಷ್ ಪರಿಹಾರ ಅವರು ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಡಾ. ರಾಜಕುಮಾರ ಸಲಗರ, ಡಾ.ದೌಲಪ್ಪ ಬಿ.ಹೆಚ್, ಡಾ.ಮಹಾಂತೇಶ ಸ್ವಾಮಿ, ಡಾ.ಶ್ರೀಮಂತ ಹೋಳ್ಕರ್, ಡಾ.ನಾಗಪ್ಪ ಗೋಗಿ, ಡಾ.ರಾಬಿಯಾ ಇಪ್ಪತ್, ಡಾ.ಶಾಮಲಾ ಸ್ವಾಮಿ, ಡಾ.ಅಮಿತ್ ಸೇರಿದಂತೆ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಸುಜಾತಾ ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಭಾಗ್ಯಲಕ್ಷ್ಮಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News