×
Ad

ಕಲಬುರಗಿ | ಕಲ್ಯಾಣ ಕ್ರಾಂತಿಗೆ ಮಡಿವಾಳ ಮಾಚಿದೇವರ ಕೊಡುಗೆ ಅನನ್ಯ : ಶಾಂತಕುಮಾರ

Update: 2025-02-01 15:42 IST

ಕಲಬುರಗಿ : 12ನೇಶತಮಾನದಲ್ಲಿ ಬಸವಾದಿ ಶರಣರು ಕೈಗೊಂಡ ಸಾಮಾಜಿಕ ಕ್ರಾಂತಿಗೆ ವೀರಘಂಟೆ ಶರಣ ಮಡಿವಾಳ ಮಾಚಿದೇವರು ಕೊಡುಗೆ ಅನನ್ಯ, ಅವರ ಕಾಯಕ ದಾಸೋಹವು ಸಮಸಮಾಜದ ವಚನಗಳನ್ನು ಅರಿತು ಆಚರಣೆಗೆ ಮುಂದಾಗಬೇಕು ಎಂದು ಆಳಂದ ತಾಲೂಕು ಮಡಿವಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಪಿ.ಮಡಿವಾಳ ನಾವದಗಿ ಅವರು ಹೇಳಿದರು.

ಆಳಂದ ಪಟ್ಟಣದ ಹೊರವಲಯದ ತಾಲೂಕು ಆಡಳಿತಸೌಧನಲ್ಲಿ ಆಚರಿಸಿದ ʼವೀರಘಂಟೆ ಮಡಿವಾಳ ಮಾಚಿದೇವರ ಜಯಂತಿʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಮಾಚಿದೇವರು ಮಡಿವಾಳ ಸಮಾಜಕ್ಕಷ್ಟೇ ಸೀಮಿತವಾಗಿದೇ ಸರ್ವ ಸಮುದಾಯಗಳಿಗೆ ವಚನಗಳ ಮೂಲಕ ಹೊಸದಿಕ್ಕನ್ನು ತೋರಿಸಿಕೊಟ್ಟಿದ್ದಾರೆ. ತೀರಾ ಹಿಂದುಳೀದ ಮಡಿವಾಳ ಸಮಾಜ ಬಾಂಧವರು ಸರಕಾರಿ ಸೌಲಭ್ಯ ಪಡೆದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂದು ಹೇಳಿದರು.

ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ಮಾತನಾಡಿ, ಶರಣರು, ಸಂತರು ತೋರಿದ ಮಾದರಿಯ ತತ್ವಗಳನ್ನು ಜನಸಾಮಾನ್ಯರು ಅಳವಡಿಸಿಕೊಂಡು ಸಮೃದ್ಧ ಸಮಾಜ ನಿರ್ಮಾಣ ಕನಸು ನನಸಾಗಿಸಲು ಇಂಥಹ ಜಯಂತಿಗಳು ಸರಕಾರ ಆಚರಣೆಗೆ ತರುತ್ತಿದೆ. ಈ ಮೂಲಕ ಜನರ ಸಹಭಾಗಿತ್ವದೊಂದಿಗೆ ಸಮೃದ್ಧಿಯೆಡೆ ಹೆಜ್ಜೆಹಾಕಬೇಕು ಎಂದು ಹೇಳಿದರು.

ಮಡಿವಾಳ ಸಮಾಜ ತಾಲೂಕು ಅಧ್ಯಕ್ಷ ಬಸವರಾಜ ಮಡಿವಾಳ ಕೊರಳ್ಳಿ, ರಾಜು ಡಿ.ಮಡಿವಾಳ ಮತ್ತಿತರು ಮಾತನಾಡಿದರು.

ಸಮಾಜದ ಸಂಸ್ಥಾಪಕ ಅಧ್ಯಕ್ಷ ಭೀಮಾಶಂಕರ ಮಡಿವಾಳ, ಗೌರವ ಅಧ್ಯಕ್ಷ ನಿಂಗಪ್ಪ ನಾಸಿ, ಉಪಾಧ್ಯಕ್ಷ ಈರಣ್ಣಾ ನಾಸಿ, ರಾಜು ಡಿ. ಮಡಿವಾಳ, ನಿಜಗುಣ ಮಡಿವಾಳ, ಕೆ.ಕೆ.ಕೆ ಜನಪರ ವೇದಿಕೆ ರಾಜ್ಯಾಧ್ಯಕ್ಷ ಶರಣು ಬಿ. ಕುಲಕರ್ಣಿ, ಜಯರಾಮ ರಾಠೋಡ, ನಿಜಗುಣ ಮಡಿವಾಳ, ಭೋಗೇಶ ಮಡಿವಾಳ, ಆನಂದ ಕವಲಗಾ, ರುಕ್ಕಪ್ಪ ಮಡಿವಾಳ ಮದಗುಣಕಿ, ಹಣಮಂತರಾಯ ಮಡಿವಾಳ, ಪರಮೇಶ್ವರ ಮಡಿವಾಳ,ಶಿವಶಂಕರ ಮಡಿವಾಳ, ಗಣಪತರಾವ್ ಪಾಟೀಲ, ನಾಗೇಂದ್ರಪ್ಪ ರೆಡ್ಡಿ, ಉತ್ಸವ ಸಿಬ್ಬಂದಿ ಆಕಾಶ ಸಜ್ಜನ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು, ನಾಗರಿಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News