ಕಲಬುರಗಿ: ಕೆಸರಟಗಿಯಲ್ಲಿ ವ್ಯಕ್ತಿಯ ಹತ್ಯೆ
Update: 2024-09-08 13:56 IST
ಕಲಬುರಗಿ, ಸೆ.8: ಇಲ್ಲಿನ ಕೆಸರಟಗಿ ಗ್ರಾಮದ ಕ್ವಾಟ್ರಸ್ ಒಂದರಲ್ಲಿ ವ್ಯಕ್ತಿಯೊಬ್ಬರನ್ನು ಇರಿದು ಹತ್ಯೆ ಮಾಡಿರುವ ಘಟನೆ ನಗರದ ವಿಶ್ವ ವಿದ್ಯಾಲಯದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.
ಮಹಾನಗರದ ತರ್ಫಾಲ್ ಬಡಾವಣೆಯ ನಿವಾಸಿ ಕಪಿಲ್ (40) ಕೊಲೆಯಾಗಿರುವ ವ್ಯಕ್ತಿ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಯುನಿವರ್ಸಿಟಿ ಠಾಣೆಯ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.