ಕಲಬುರಗಿ | ಫೆ.15 ರಂದು ಮಿನಿ ಉದ್ಯೋಗ ಮೇಳ
ಕಲಬುರಗಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಯುಥ್ 4ಜಾಬ್ಸ್ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ಫೆ.15 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಂತಿದೆ :
ಮೆಡಿ ಚಾಯ್ಸಿ ಫಾರ್ಮಸಿಯಲ್ಲಿ ಬಿಲ್ಲಿಂಗ್ ಆ್ಯಂಡ್ ಸೇಲ್ಸ್ ಹುದ್ದೆಗೆ ಎಸೆಸೆಲ್ಸಿ/ಪಿಯುಸಿ/ಯಾವುದೇ ಪದವಿ ಪಾಸಾಗಿರಬೇಕು. ಸೇಡಂ ಚಿಟ್ಫಂಡ್ ಬ್ಯಾಂಕ್ನಲ್ಲಿ ಕಲೆಕ್ಷನ್ ಆಂಡ್ ಸೇಲ್ಸ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ಭಾಗ್ಯೋದಯ ಸೋಶಿಯಲ್ ವೇಲ್ಫೇರ್ದಲ್ಲಿ ಫೀಲ್ಡ್‌ವರ್ಕ್ ಹುದ್ದೆಗೆ ಎಸೆಸೆಲ್ಸಿ/ಪಿಯುಸಿ ಪಾಸಾಗಿರಬೇಕು. ಮಾರುತಿ ಸುಝುಕಿದಲ್ಲಿ ಹ್ಯಾಂಡಲಿಂಗ್ ಕಾಲ್ಸ್ ಹುದ್ದೆಗೆ ಪಿಯುಸಿ ಯಾವುದೇ ಪದವಿ ಪಾಸಾಗಿರಬೇಕು. ಉಡುಪಿ ಲಾಡ್ಜ್ನಲ್ಲಿ ವೇಟರ್ ಹುದ್ದೆಗೆ 7ನೇ/ ಎಸೆಸೆಲ್ಸಿ/ಪಿಯುಸಿ ಪಾಸಾಗಿರಬೇಕು. ಹೆರಿಟೇಜ್ ರೆಸ್ಟೂರೆಂಟ್ದಲ್ಲಿ ಫ್ರಂಟ್ ಆಫೀಸ್/ ಹೆಲ್ಪರ್/ ಕಸ್ಟಮರ್ ಅಟೆಂಡರ್ ಹುದ್ದೆಗೆ 7ನೇ/ ಎಸೆಸೆಲ್ಸಿ/ಪಿಯುಸಿ ಪಾಸಾಗಿರಬೇಕು. ವಿಜಯಲಕ್ಷ್ಮಿ ಸಾರಿ ಸೆಂಟರ್ದಲ್ಲಿ ಸೇಲ್ಸ್ ಆ್ಯಂಡ್ ಸುಪರವೈಜರ್ ಹುದ್ದೆಗೆ ಎಸೆಸೆಲ್ಸಿ/ಪಿಯುಸಿ ಪಾಸಾಗಿರಬೇಕು.
ಲಾಹೋಟಿ ಎಚ್.ಪಿ. ಪೆಟ್ರೋಲ್ ಪಂಪ್ ನಲ್ಲಿ ಹೆಲ್ಪರ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ಆಮೀರ ಟ್ರೆಂಡ್ಸ್ ಹಾಗೂ ಕಾಳಿಂಗ್ ಲಾಡ್ಜ್ನಲ್ಲಿ ಹೆಲ್ಪರ್ ಹುದ್ದೆಗೆ ಎಸೆಸೆಲ್ಸಿ/ಪಿಯುಸಿ ಪಾಸಾಗಿರಬೇಕು. ಆಶ್ರಯ ನಾಗಾರ್ಜುನ ವಸತಿ ಗೃಹದಲ್ಲಿ ಹೆಲ್ಪರ್ ಹುದ್ದೆಗೆ 7ನೇ/ ಎಸೆಸೆಲ್ಸಿ/ಪಿಯುಸಿ ಪಾಸಾಗಿರಬೇಕು.
ಸ್ವಾಭಿಮಾನಿ ಸ್ವದೇಶಿ ಮಾರ್ಟ್ನಲ್ಲಿ ಮ್ಯಾನೇಜರ್/ ಸೂಪವೈಜರ್/ ಹೆಲ್ಪರ್ ಹುದ್ದೆಗೆ, ಗುರುದತ್ತ ಹೋಟೆಲ್ದಲ್ಲಿ ಕುಕಿಂಗ್/ ಸಪ್ಲೈಯರ್ ಆಂಡ್ ಹೆಲ್ಪರ್ ಹುದ್ದೆಗೆ, ಗುಲ್ಬರ್ಗಾ ಹೋಟೆಲ್ ಮತ್ತು ಲಾಡ್ಜ್ ಅಸೋಶಿಯಶನ್ದಲ್ಲಿ ಮ್ಯಾನೇಜರ್/ಸೂಪವೈಜರ್/ಹೆಲ್ಪರ್/ಕುಕಿಂಗ್ ಹುದ್ದೆ ಹಾಗೂ ಸ್ನೇಹ ದರ್ಶಿನಿಯಲ್ಲಿ ಕುಕ್ಕಿಂಗ್ ಹುದ್ದೆಗೆ ಎಸೆಸೆಲ್ಸಿ/ಪಿಯುಸಿ/ಯಾವುದೇ ಪದವಿ ಪಾಸಾಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್‌ಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಬೇಕು.
ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846 ಗೆ ಸಂಪರ್ಕಿಸಲು ಕೋರಲಾಗಿದೆ.