ಕಲಬುರಗಿ| ಕೆಪಿಎಸ್ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ
Update: 2025-12-27 19:45 IST
ಕಲಬುರಗಿ: ಎಂಎಸ್ ಕೆ ಮಿಲ್ ನಲ್ಲಿರುವ ಕೆಪಿಎಸ್ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಕೆಪಿಎಸ್ ಶಾಲೆಯಿಂದ ಸುಮಾರು 250 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದಾರೆ. ಶುಗರ್ ಫ್ಯಾಕ್ಟರಿ, ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆ, ಮತ್ತು ಚಂದ್ರಂಪಲ್ಲಿ ಡ್ಯಾಮ್, ಸೇರಿದಂತೆ ಇತರ ಸ್ಥಳಗಳನ್ನು ವಿದ್ಯಾರ್ಥಿಗಳಿಗೆ ತೋರಿಸೋದಕ್ಕಾಗಿ ಪ್ರವಾಸ ಕೈಗೊಳ್ಳಲಾಗಿದೆ. ಸುಮಾರು 250 ವಿದ್ಯಾರ್ಥಿಗಳ ಒಂದು ದಿನದ ಪ್ರವಾಸಕ್ಕೆ ತೆರಳಿದ್ದಾರೆ.
ಈ ವೇಳೆ ಎಸ್ ಡಿಎಂಸಿ ಉಪಾಧ್ಯಕ್ಷರಾದ ಶೇಕ್ ಸಮ್ರಿನ್, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಕ್ ಹುಸೇನ್ ಬಾಬಾ, ಮೆಹಬೂಬ್ ಪಟೇಲ್, ಮೋದಿನ್ ಪಟೇಲ್, ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.