×
Ad

ಕಲಬುರಗಿ | ಎಲ್ಲ ವಿದ್ಯೆಗಳಲ್ಲಿ ಸಂಗೀತ ವಿದ್ಯೆಯೇ ಶ್ರೇಷ್ಠ: ಮಡಿವಾಳಯ್ಯ ಹಿರೇಮಠ

Update: 2025-01-12 16:37 IST

ಕಲಬುರಗಿ : ಸಂಗೀತ ಎಂಬುದು ವೇಗವಾಗಿ ಕಲಿಯುವ ವಿದ್ಯೆಯಲ್ಲ. ಒಬ್ಬ ನಿಜವಾದ ಸಂಗೀತಗಾರರು ಆ ವಿದ್ಯೆಯಲ್ಲಿ ಪರಿಪೂರ್ಣರಾಗಬೇಕಾದರೆ ಸುಮಾರು 12 ವರ್ಷಗಳ ಕಾಲ ಸತತ ಅಭ್ಯಾಸಮಾಡಿದಾಗ ಮಾತ್ರ ಶ್ರೇಷ್ಠ ಸಂಗೀತ ಗಾಯಕನಾಗಲು ಸಾಧ್ಯ ಎಂದು ಹಿರಿಯ ಕಲಾವಿದರಾದ ಮಡಿವಾಳಯ್ಯ ಹಿರೇಮಠ ಕೊರಳ್ಳಿ ಹೇಳಿದರು.

ನಗರದ ಶ್ರೀ ಜ್ಞಾನ ಸರಸ್ವತಿ ಮಂದಿರ ಆವರಣದಲ್ಲಿ ಗಾನ ಜ್ಯೋತಿ ಸಾಂಸ್ಕೃತಿಕ ಕಲಾ ಸಂಸ್ಥೆ ಶ್ರೀನಿವಾಸ ಸರಡಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ʼಸಂಗೀತ ಸುನಾದ ಸಾಂಸ್ಕೃತಿಕ ಕಾರ್ಯಕ್ರಮʼವನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತವು ಜೀವನದ ಆತ್ಮವಾಗಿದೆ. ಶೈಕ್ಷಣಿಕ ಕಾರ್ಯಕ್ಷಮತೆ, ಆರೋಗ್ಯ, ಯೋಗಕ್ಷೇಮ, ಏಕಾಗ್ರತೆ ಹೆಚ್ಚಿಸುತ್ತದೆ. ಸಂಗೀತಕ್ಕೆ ಮಾನಸಿಕ ಆರೋಗ್ಯ ವೃದ್ಧಿಸುವ ಗುಣವಿದೆ. ಇದು ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕರಾದ ಆನಂದ ಕೊಡೆಕಲ್ಲ ಮಾತನಾಡಿ, ಸಂಗೀತ ವಿದ್ಯೆಯು ಅತ್ಯಂತ ಕಠಿಣವಾದ ಹಾಗೂ ಸತತ ಅಭ್ಯಾಸದ ವಿದ್ಯೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಷಾ ಹಾರಕೂಡ, ವಿಶ್ವನಾಥ ರಾಜನಾಳ, ಸಾಗರ ಆಲೂರ ಸಂಸ್ಥೆಯ ಅಧ್ಯಕ್ಷ ಪ್ರವಿಣಕುಮಾರ ರೂದನೂರ ಭಾಗವಹಿಸಿದರು. ನಂತರ ಸಂಗೀತ ಸುನಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ವೀರಯ್ಯ ಮಾಡ್ಯಾಳ, ಪವಿತ್ರಾ ವಿಶ್ವನಾಥ, ರೇಣುಕಾ ಖೂನಿ, ಸರಸ್ವತಿ ಮಠಪತಿ, ವೀರಭದ್ರಯ್ಯ ಸ್ಥಾವರಮಠ, ಚೇತನ ಬೀದಿಮನಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News