×
Ad

ಕಲಬುರಗಿ | ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಒಂದು ದಿನದ ಇನ್ಕ್ಯುಬೇಷನ್ ಜಾಗೃತಿ

Update: 2025-10-08 22:57 IST

ಕಲಬುರಗಿ : ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಬ್ಯಾಂಕ್ ನೆರವಿನ ಭಾರತ ಸರ್ಕಾರದ ರ‍್ಯಾಂಪ್‌ ಯೋಜನೆಯಡಿ ಒಂದು ದಿನದ ಇನ್ಕ್ಯುಬೇಷನ್ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಲಬುರಗಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಉದ್ಘಾಟಿಸಿ, ಕಲ್ಯಾಣ-ಕರ್ನಾಟಕ ಭಾಗದ ಯುವಕ-ಯುವತಿಯರು ಹೊಸ ಕಲ್ಪನೆ, ಸೃಜನಶೀಲತೆಯಿಂದ ನವೋದ್ಯಮ ಪ್ರಾರಂಭಿಸಲು ಯೋಜಿಸಿದ್ದಲ್ಲಿ ಇಲಾಖೆ ಮತ್ತು ಸರ್ಕಾರವು ಸಹಾಯ ಮಾಡಲು ಸದಾಸಿದ್ಧವಿದೆ ಎಂದು ತಿಳಿಸಿದರು.

ರ‍್ಯಾಂಪ್‌ ಎಂಬುದು ಭಾರತ ಸರ್ಕಾರ ಪ್ರಾರಂಭಿಸಿದ ವಿಶ್ವಬ್ಯಾಂಕ್ ಬೆಂಬಲಿತ ಕೇಂದ್ರ ವಲಯ ಯೋಜನೆಯಾಗಿದೆ. RAMP ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂ ಇ) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಂದು ಕಾರ್ಯತಂತ್ರದ ಉಪಕ್ರಮವಾಗಿದೆ. ಈ ಕಾರ್ಯಕ್ರಮದ ಉದ್ದೇಶವು ಎಂಎಸ್ಎಂಇಗಳನ್ನು ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ, ಮಾರುಕಟ್ಟೆ ಅವಕಾಶಗಳು ಮತ್ತು ಸಾಲದ ಪ್ರವೇಶವನ್ನು ಸುಧಾರಿಸುವ ಮೂಲಕ, ನಾವೀನ್ಯತೆಯನ್ನು ಬೆಳೆಸುವ ಮೂಲಕ ಮತ್ತು ಹೊಸ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವ ಮೂಲಕ ಬಲಪಡಿಸುವುದಾಗಿದೆ ಎಂದರು.

ಈ ಕಾರ್ಯಕ್ರಮವು ಮಾರುಕಟ್ಟೆ ಮತ್ತು ಸಾಲ ಪ್ರವೇಶವನ್ನು ಸುಧಾರಿಸುವ ಮೂಲಕ, ವಿಳಂಬಿತ ಪಾವತಿಗಳಲ್ಲಿ ಸಂಸ್ಥೆಗಳು ಮತ್ತು ಆಡಳಿತವನ್ನು ಬಲಪಡಿಸುವ ಮೂಲಕ ಮತ್ತು ಒಒಇ ಗಳನ್ನು ಹಸಿರೀಕರಣಗೊಳಿಸುವ ಮೂಲಕ ಎಂಎಸ್ಎಂ ಇ ಗಳಿಗೆ ಸಮಗ್ರ ಬೆಂಬಲವನ್ನು ಒದಗಿಸುವುದನ್ನು ಉದ್ದೇಶಿಸುತ್ತದೆ. ರ‍್ಯಾಂಪ್‌ ಕಾರ್ಯಕ್ರಮವು ಎಂಎಸ್ಎಂ ಇ ಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಅವುಗಳ ಏಕೀಕರಣವನ್ನು ಬೆಂಬಲಿಸಲು ಸಹ ಪ್ರಯತ್ನಿಸುತ್ತದೆ ಎಂದು ವಿವರಿಸಿದರು.

ಅಲ್ಲದೆ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಎಂಎಸ್‌ಎಂಇ ಗಳಿಗೆ ಮಾರ್ಗದರ್ಶನ, ನೆಟ್‌ವರ್ಕಿಂಗ್ ಮತ್ತು ಬಂಡವಾಳ ಸಹಾಯವನ್ನು ನೀಡುತ್ತದೆ. ಈ ಕಾರ್ಯಾಗಾರಗಳನ್ನು ಯುವ ವಿದ್ಯಾರ್ಥಿಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಇನ್ಕ್ಯುಬೇಷನ್ ಯೋಜನೆಯ ಬಗ್ಗೆ ಶಿಕ್ಷಣ ನೀಡಲು ಆಯೋಜಿಸಲಾಗಿದೆ. ಈ ಕಾರ್ಯಾಗಾರಗಳು ಯುವಕರಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಇನ್ಕ್ಯುಬೇಷನ್ ಅವಕಾಶಗಳ ಅರಿವನ್ನು ಬೆಳೆಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ವಿ.ಟಿ.ಯು, ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ . ಶುಭಾಂಗಿ ಡಿ.ಸಿ., ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಾಂತ್ರಿಕ ಅಧಿವೇಶನಗಳ ಸದುಪಯೋಗ ಪಡೆಯಲು ಕರೆ ನೀಡಿದರು.

ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಡಾ. ಚಂದ್ರಕಾಂತ ಚಂದಾಪೂರ, ಡಾ.ಮುಹಮ್ಮದ್ ಅಬ್ದುಲ್ ವಹೀದ್, ಡಾ.ಬ್ರಿಜಭೂಷಣ ಎಸ್, ಡಾ.ಸತೀಶ್ ಉಪಲಾಂವಕರ್ , ರವಿಗೌಡ, ಮಣಿ ತೇಜಾ, ಸಯ್ಯದ್ ಅಶ್ಫಾಕ್ ಅಹ್ಮದ್, ಕು. ರುಪಾಲಿ ಶೇರಖಾನೆ, ಜಾಫರ ಖಾಸಿಮ ಅನ್ಸಾರಿ ಹಾಜರಿದ್ದರು.

5 ತಾಂತ್ರಿಕ ಅಧಿವೇಶನಗಳು ನಡೆದವು. ಸಾನಿಯಾ ಫರ್ಹಿನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News