Kalaburagi | ಮಹಾನವಮಿ-ದಸರಾ ಹಬ್ಬದ ಪ್ರಯುಕ್ತ ವಿಶೇಷ ಬಸ್‌ಗಳ ಕಾರ್ಯಾಚರಣೆ
ಕಲಬುರಗಿ: ಮಹಾನವಮಿ ಹಾಗೂ ದಸರಾ ಹಬ್ಬದ ಪ್ರಯುಕ್ತ ತುಳಜಾಪುರ ಶ್ರೀ ಮಾತಾ ಅಂಬಾಭವಾನಿ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2 ವತಿಯಿಂದ ಅ.8ರಿಂದ 28ರವರೆಗೆ ವಿಶೇಷ ಹಾಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ವಿಭಾಗ-2ರ ವ್ಯಾಪ್ತಿಯ ವಿವಿಧ ಬಸ್ ನಿಲ್ದಾಣಗಳು ಹಾಗೂ ಘಟಕಗಳಿಂದ ವಿಶೇಷ ಮತ್ತು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಅಗತ್ಯವಿದ್ದಲ್ಲಿ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ವಿಭಾಗೀಯ ಸಂಚಾರ ಅಧಿಕಾರಿ ರಾಜಶೇಖರ ವಾಜಂತ್ರಿ-7760984086, ಕಲಬುರಗಿ ಘಟಕ-2ರ ಘಟಕ ವ್ಯವಸ್ಥಾಪಕ ಅಶೋಕಕುಮಾರ ದೊಡಮನಿ-7760992114, ಕಲಬುರಗಿ ಘಟಕ-3ರ ಘಟಕ ವ್ಯವಸ್ಥಾಪಕ ಪ್ರೀತಿ ಕಾಳೆ-7760992115, ಆಳಂದ ಘಟಕದ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಭಿ-7760992116, ಜೇವರ್ಗಿ ಘಟಕದ ಘಟಕ ವ್ಯವಸ್ಥಾಪಕ (ಪ್ರ) ಈಶ್ವರ-7760992118, ಅಫಜಲಪುರ ಘಟಕದ ಘಟಕ ವ್ಯವಸ್ಥಾಪಕ ಎಸ್.ಎಂ. ವಾಲಿಕಾರ-7760992121 ಅವರನ್ನು ಸಂಪರ್ಕಿಸಬಹುದು.
ಅದೇ ರೀತಿ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ನಿಲ್ದಾಣಾಧಿಕಾರಿ ನಾಗೇಶ ಜವಳಿ-9686976451 ಹಾಗೂ ಸಂಚಾರ ನಿರೀಕ್ಷಕ ಸೂರ್ಯಕಾಂತ ಸಿಂಗೆ-9739501542 ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಇದಲ್ಲದೆ, ಒಂದೇ ಸ್ಥಳದಿಂದ 40ರಿಂದ 45 ಜನ ಪ್ರಯಾಣಿಕರು ಪ್ರಯಾಣಿಸಲು ಸಿದ್ಧರಿದ್ದಲ್ಲಿ, ಆಯಾ ಗ್ರಾಮದಿಂದಲೇ ನೇರವಾಗಿ ಸಾರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.