ಕಲಬುರಗಿ | ಉತ್ತಮ ಆರೋಗ್ಯದ ಕಡೆ ಗಮನ ವಿರಲಿ : ಜಯಶ್ರೀ ಹಾಲಕಾಯಿ
ಕಲಬುರಗಿ : ಶ್ರೀ ಹಿಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀ ಮಲ್ಲೇಶಪ್ಪ ಮಿಣಜಿಗಿ ಪ್ರತಿಷ್ಠಾನ ಇವರ ಸಯುಕ್ತಾಶ್ರಯದಲ್ಲಿ ಗಾಜಿಪುರದಲ್ಲಿ ಉಚಿತ ತಪಾಸಣಾ ಶಿಬಿರ ಜರುಗಿತು.
ಖ್ಯಾತ ಪ್ರಶೂತಿ ಮತ್ತು ಸ್ತ್ರೀರೋಗ ತಜ್ಞರಾದ ಜಯಶ್ರೀ ಹಾಲಕಾಯಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಯಾಶೀಲ ಬದುಕು ಪೌಷ್ಟಿಕ ಆಹಾರ ಹಾಗೂ ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮ ಮೂಲಕ ಆರೋಗ್ಯವನ್ನು ಯುವಕರು ಕಾಪಾಡಿಕೊಳ್ಳಬೇಕು ಜಂಕ್ ಫುಡ್ ಹಾಗೂ ಆರೋಗ್ಯವನ್ನು ಹಾಳು ಮಾಡುವ ಚಟಗಳಿಂದ ದೂರವಿರುವಂತೆ ಯುವಕರಿಗೆ ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ಅಲ್ಲಮ ಪ್ರಭು ಅವರು ಮಾತನಾಡಿ, ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದಂತೆ ತಕ್ಷಣ ಔಷಧಿಯನ್ನು ಪ್ರಾರಂಭಿಸುವ ಬದಲು ರೋಗಕ್ಕೆ ಕಾರಣವಾಗುವ ನಿಧಾನವನ್ನು ತ್ಯಜಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನ ಹಾಗೂ ದೀರ್ಘ ಆಯುಷ್ಯಕ್ಕಾಗಿ ಆಯುರ್ವೇದದ ಪಂಚಕರ್ಮ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ಹಾಗೂ ಖ್ಯಾತ ಪ್ರಸೂತಿ ಸ್ತ್ರೀರೋಗ ತಜ್ಞ ಡಾ.ಇಂದಿರಾ ಶಕ್ತಿಯವರು ಮಾತನಾಡಿ, ತಮ್ಮ ಮಲ್ಲೇಶಪ್ಪ ಬಿಣಜಿಗಿ ಪ್ರತಿಷ್ಠಾನದ ವತಿಯಿಂದ ಪ್ರತಿ ತಿಂಗಳು ಗಾಜಿಪುರದಲ್ಲಿ ಆಯೋಜಿಸುತ್ತಿರುವ ಈ ಈ ಶಿಬಿರದಿಂದ ನೂರಾರು ರೋಗಿಗಳಿಗೆ ಲಾಭವಾಗುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಮೇಘ, ಡಾ.ಮೈತ್ರಾದೇವಿ ಹಾಗೂ ಇನ್ನಿತರ ವೈದ್ಯರ ತಂಡ ಉಪಸ್ಥಿತರಿದ್ದರು.