×
Ad

Kalaburagi | ಶಿಕ್ಷಕರ ತಾತ್ಕಾಲಿಕ ಕರಡು ಜೇಷ್ಠತಾ ಪಟ್ಟಿ ಪ್ರಕಟ

Update: 2026-07-01 19:22 IST

ಸಾಂದರ್ಭಿಕ ಚಿತ್ರ

ಕಲಬುರಗಿ : ಕಲಬುರಗಿ ಆಯುಕ್ತಾಲಯದ 7 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ಮತ್ತು ತತ್ಸಮಾನ ವೃಂದದ ಶಿಕ್ಷಕರ ಪ್ರಾರಂಭದ ಮೂಲ ವೃಂದ, ಸ್ಥಳೀಯ ವೃಂದ ಹಾಗೂ ಉಳಿದ ಮೂಲ ವೃಂದದ ಪ್ರತ್ಯೇಕವಾದ ತಾತ್ಕಾಲಿಕ ಕರಡು ಜೇಷ್ಠತಾ ಪಟ್ಟಿಯನ್ನು ದಿನಾಂಕ: 01/01/2026 ರಲ್ಲಿದ್ದಂತೆ ಇಲಾಖೆಯ https://cpikalaburgi.karnataka.gov.in ವೆಬ್‍ಸೈಟ್‍ ನಲ್ಲಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರು ಗ್ರೇಡ್-2 ಮತ್ತು ತತ್ಸಮಾನ ವೃಂದದ ಶಿಕ್ಷಕರು ಪ್ರಕಟಿತ ತಾತ್ಕಾಲಿಕ ಕರಡು ಜೇಷ್ಠತಾ ಪಟ್ಟಿಯಲ್ಲಿ ಶಿಕ್ಷಕರ ಸೇವಾ ವಿವರದ ಮಾಹಿತಿ (ಹೆಚ್.ಆರ್.ಎಂ.ಎಸ್/ ಇಇಡಿಎಸ್ ತಂತ್ರಾಂಶದಲ್ಲಿರುವಂತೆ ಹಾಗೂ ಮೂಲ ಸೇವಾ ಪುಸ್ತಕದಲ್ಲಿರುವಂತೆ) ಶಿಕ್ಷಕರ ಹೆಸರು, ಜನ್ಮ ದಿನಾಂಕ, ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಹಾಜರಾದ/ಸೇವೆಗೆ ಸೇರಿದ ದಿನಾಂಕ, ವಿಭಾಗಕ್ಕೆ ಬಂದ ದಿನಾಂಕ, ಬೋಧನಾ ವಿಷಯ, ವಿದ್ಯಾರ್ಹತೆ/ವಿಷಯ/ಸ್ನಾತಕೊತ್ತರ ಪದವಿ, ಮೆರಿಟ್ ಮಾಹಿತಿ, ಇತರೆ ಯಾವುದೇ ತರಹದ ದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ಶಿಕ್ಷಕರು ಸೂಕ್ತ ದೃಢೀಕೃತ ದಾಖಲೆಗಳೊಂದಿಗೆ ದೋಷಗಳನ್ನು ಸರಿಪಡಿಸಲು ನಮೂನೆ-1 ಮತ್ತು ಹೊಸದಾಗಿ ಸೇರ್ಪಡೆ ಮಾಡಲು ನಮೂನೆ-2 ಅನ್ನು ನಿಗದಿತ ನಮೂನೆಗಳಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಉಪನಿರ್ದೇಶಕರ ಕಚೇರಿಗಳಲ್ಲಿ 2026ರ ಜುಲೈ 2 ರಿಂದ ಜುಲೈ 15 ರೊಳಗಾಗಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು. ಸಂಬಂಧಿಸಿದ ಶಿಕ್ಷಕರು ಇದನ್ನು ಗಮನಕ್ಕೆ ಗಮನಿಸಬೇಕೆಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News