ಕಲಬುರಗಿ | ಸದೃಢ ಭಾರತಕ್ಕೆ ಮಹಿಳೆಯರ ಪಾತ್ರ ಅಗತ್ಯ : ಉಮಾ ಪೂಜಾ
ಕಲಬುರಗಿ : ಹೆಣ್ಣು ಮಗಳು ಹುಟ್ಟಿದರೇ ಆ ಮನೆಗೆ ಮತ್ತು ತಂದೆಗೆ ಗರ್ವದ ಸಂಕೇತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಮಾ ಪೂಜಾರಿ ಅಭಿಮತಪಟ್ಟರು.
ಜೇವರ್ಗಿ ಪಟ್ಟಣದ ಗುರುಕುಲ ಶಾಲಾ ಆವರಣದಲ್ಲಿನ ಶ್ರೀಮತಿ ದಾನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಾದೇವಿ ತಾಯಿ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ʼಅರಿವು ಕಾರ್ಯಕ್ರಮʼ ಉದ್ದೇಶಿಸಿ ಉಮಾ ಪೂಜಾರಿ ಮಾತನಾಡಿದರು.
ಭಾರತ ಸರ್ಕಾರ ಜಾರಿಗೆ ತಂದ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆ ಜಾರಿಗೆ ಬಂದು 10 ವರ್ಷಗಳು ಗತಿಸಿದ ನಿಮಿತ್ಯ ಈ ಅರಿವು ಕಾರ್ಯಕ್ರಮ ಆಚರಿಸಲಾಗಿದೆ ಎಂದು ಹೇಳಿದರು.
ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ಪ್ರತಿನಿಧಿ ಭೂಮಿಕಾ ಚವ್ಹಾಣ ಮಾತನಾಡಿ, ಹೆಣ್ಣು ಮಕ್ಕಳಿಗಾಗಿ ಇರುವ ಹತ್ತು ಹಲವಾರು ಕಾಯ್ದೆ ಕಾನೂನುಗಳ ಬಗ್ಗೆ ಸುದೀರ್ಘ ಮಾಹಿತಿಯನ್ನು ನೀಡಿದರು.
ಶಿಕ್ಷಣವೇ ಸರ್ವ ಸಮಸ್ಯೆಗಳಿಗೆ ಬ್ರಹ್ಮಾಸ್ತ್ರ, ಮಹಿಳೆಯರು, ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು. ಶಿಕ್ಷಣವೇ ತಮ್ಮ ಸಮಸ್ಯೆಗಳಿಗೆ ಬ್ರಹ್ಮಾಸ್ತ್ರವಾಗಲಿದೆ. ಇಂತಹ ಅರಿವು ಕಾರ್ಯಕ್ರಮಗಳು ಪ್ರತಿ ಬಡಾವಣೆಗಳಲ್ಲಿ ಸಹ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಚಾರ್ಯ ಧನರಾಜ ರಾಠೋಡ ಮುತ್ತಕೋಡ, ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಜ್ಯೋತಿ ಸಾಲಿಮಠ, ಷಣ್ಮುಖ ಗೌಡ ರಾಸಣಗಿ, ಉಮಾ ಪೂಜಾರಿ, ಭೂಮಿಕಾ ಚವ್ಹಾಣ, ಜಯಶ್ರೀ ಸಿನ್ನೂರಕರ, ಎಸ್ ಎಸ್ ಚತುರಾಚಾರಿಮಠ, ಸೇರಿದಂತೆ ಅನೇಕರು ಇದ್ದರು.