×
Ad

ಕಲಬುರಗಿ | ರೌಡಿ ಶೀಟರ್ ಜ್ವಾಲೇಂದ್ರನಾಥ ಬೆಂಗಳೂರಿಗೆ ಗಡಿಪಾರು

Update: 2025-06-19 22:38 IST

ಕಲಬುರಗಿ: ಕಲಬುರಗಿ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರೌಡಿ ಶೀಟರ್‌ ಜ್ವಾಲೇಂದ್ರನಾಥ(37) ಎಂಬಾತನನ್ನು ಬೆಂಗಳೂರು ನಗರ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ವಿಶೇಷ ಕಾರ್ಯಾನಿರ್ವಾಹಕ ದಂಡಾಧಿಕಾರಿ ಆಗಿರುವ ಡಿಸಿಪಿ ಕನಿಕಾ ಸಿಕ್ರಿವಾಲ್ ರೌಡಿ ಶೀಟರ್‌ ಜ್ವಾಲೇಂದ್ರನಾಥನನ್ನು  ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರದ ಅಫಝಲಪುರ ರಸ್ತೆ ಬಿದ್ದಾಪೂರ ಕಾಲೋನಿಯ ನಿವಾಸಿ ಜ್ವಾಲೇಂದ್ರನಾಥ ವಿರುದ್ದ ಅಶೋಕನಗರ ಪೊಲೀಸ್ ಠಾಣೆಯಲ್ಲಿ 9 ಪ್ರಕರಣಗಳು, ಸಬ್ ಅರ್ಬನ್ ಪೊಲೀಸ್ ಠಾಣೆ ಮತ್ತು ಫರಹತಾಬಾದ್‌ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ, ಸ್ಟೇಷನ್ ಬಝಾರ್‌ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಮತ್ತು ಮಹಾಗಾಂವ್‌ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಶಹಾಬಾದ್‌ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳು ದಾಖಲಾಗಿದೆ.

ಜ್ವಾಲೇಂದ್ರನಾಥ ಕಲಬುರಗಿ ನಗರ ಹಾಗೂ ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಇದಲ್ಲದೆ ಸಾರ್ವಜನಿಕ ಶಾಂತಿ ಭಂಗ,  ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪದಲ್ಲಿಯೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದೆ. 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News