ಕಲಬುರಗಿ | ಹಿರಾಪೂರ ಪಿಕೆಪಿಎಸ್ ಆಡಳಿತ ಮಂಡಳಿಗೆ ನೂತನ ಸದಸ್ಯರ ಆಯ್ಕೆ
Update: 2025-01-06 19:15 IST
ಕಲಬುರಗಿ : ಇಲ್ಲಿನ ಹಿರಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ-2024-25ನೇ ಸಾಲಿನಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರ ನಿಯಮ 14 ಝಡ್ನಲ್ಲಿ ಉಪಭಂದಾನುಸಾರ ರಿಟರ್ನಿಂಗ್ ಅಧಿಕಾರಿಯಾದ ಬಸವರಾಜ ಪುಲಾರಿ ಅವರ ನೇತೃತ್ವದಲ್ಲಿ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶರಣಪ್ಪಾ ಪಾಟೀಲ, ಉಪಾಧ್ಯಕ್ಷರಾಗಿ ರಾಜಶೇಖರ ಯಳಮೇಲಿ, ನಿರ್ದೇಶಕರಾಗಿ ಗಂಗಾಧರ ಪಾಟೀಲ, ಮಲ್ಲಿಕಾರ್ಜುನ ಪದ್ಮಾಜಿ, ಶಿವುಕುಮಾರ ತಾಡಪಳ್ಳಿ, ಮಹಾಂತೇಶ ಪಾಟೀಲ, ಸುರೇಖಾ ಪೂಜಾರಿ, ಸರಸ್ವತಿ ಬೆಣ್ಣೂರ, ಹಾಜಿಸಾಬ, ಲಿಂಗಣ್ಣಾ ಹರಸೂರ, ಮಾಪಣ್ಣಾ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೃ.ಪ.ಸ.ಸಂ.ನಿ ಹೀರಾಪೂರ ಕಾರ್ಯದರ್ಶಿ ಸಂಜುಕುಮಾರ ಅವರು ತಿಳಿಸಿದ್ದಾರೆ.