×
Ad

ಕಲಬುರಗಿ | ಶಾರ್ಟ್ ಸರ್ಕ್ಯೂಟ್: ಎರಡು ಅಂಗಡಿಗಳು ಭಸ್ಮ

Update: 2024-08-09 12:20 IST

ಕಲಬುರಗಿ: ಚಿತ್ತಾಪುರ ಪಟ್ಟಣದ ಕಲಬುರಗಿ ರಸ್ತೆಯಲ್ಲಿರುವ ಜೆಸ್ಕಾಂ ಇಲಾಖೆಯ ಟಿಸಿ ರಿಪೇರಿ ಕೇಂದ್ರಕ್ಕೆ ಹಾಗೂ ಫಾರಂ ಬೈಟ್ ಅಗ್ರಿಕಲ್ಚರ್ ಮಶೀನರಿ ದಾಸ್ತಾನು ಗೋದಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಅಂಗಡಿಗಳ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ನವರಂಗ ಏಜೆನ್ಸಿ ಅವರು ವಿದ್ಯುತ್ ಸಂಪರ್ಕಕ್ಕೆ ಅಳವಡಿಸುವ ಟಿಸಿ ರಿಪೇರಿ ಸೆಂಟರ್ನಲ್ಲಿ ಸುಮಾರು 45 ಲಕ್ಷ ರೂ. ಮೌಲ್ಯದ ಸಾಮಗ್ರಿಗಳಾದ ಟಿಸಿ, ರಿಪೇರಿ ಕಿಟ್, ಆಯಿಲ್ ಸೇರಿದಂತೆ ಎಲ್ಲ ಸಾಮಗ್ರಿಗಳು ಸುಟ್ಟುಕರಕಲಾಗಿವೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

ಪಕ್ಕದಲ್ಲಿರುವ ಫಾರಂ ಬ್ರೈಟ್ ಅಗ್ರಿಕಲ್ಚರ್ ಮೆಶಿನರಿ ದಾಸ್ತಾನು ಗೋದಾಮಿನಲ್ಲಿ ಚಿಕ್ಕ ಟ್ರ್ಯಾಕ್ಟರ್ ಗಳು, ಬೆಳೆ ಕಟ್ಟಿಂಗ್ ಮೆಷಿನ್ ಗಳು, ಸ್ಪೇರ್ ಪಾರ್ಟ್ ಗಳು ಸೇರಿದಂತೆ ಸುಮಾರು 57 ಲಕ್ಷ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಪೊಲೀಸ್ ದೂರಿನಲ್ಲಿ ಅಂಗಡಿ ಮಾಲಕ ಮುಹಮ್ಮದ್ ಆರಿಫ್ ತಿಳಿಸಿದ್ದಾರೆ.

ಬೆಂಕಿ ತಗಲಿರುವ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News