×
Ad

ಕಲಬುರಗಿ | ಆಧಾರ್ ಸೀಡಿಂಗ್, ದರಖಾಸ್ತು ಪೋಡಿ ವಿತರಣೆ ಕಾರ್ಯಕ್ಕೆ ವೇಗ‌ ಹೆಚ್ಚಿಸಿ : ಬಿ.ಫೌಝಿಯಾ ತರನ್ನುಮ್

Update: 2025-04-20 20:48 IST

ಕಲಬುರಗಿ : ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಜೋಡಣೆ ಮತ್ತು ದರಖಾಸ್ತು ಪೋಡಿ ವಿತರಣೆ ಕಾರ್ಯಕ್ಕೆ ಹೆಚ್ಚಿನ ವೇಗ‌ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.

ಶನಿವಾರ ತಮ್ಮ‌ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಎ.24 ರಂದು ಕಂದಾಯ ಸಚಿವ‌ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ತಹಶೀಲ್ದಾರರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

ಪಹಣಿಗೆ ಆಧಾರ್ ಜೋಡಣೆ ಕಾರ್ಯ ಶೇ.100 ಸಾಧಿಸಿದಲ್ಲಿ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ, ಬೆಳೆ‌ ವಿಮೆ ಸೇರಿದಂತೆ ಇನ್ನಿತರ ಸರ್ಕಾರಿ ಸವಲತ್ತು ಪಡೆಯಲು ಅನುಕೂಲವಾಗಲಿದೆ. ಇನ್ನು ಸರ್ಕಾರದಿಂದ ಭೂಮಿ ಮಂಜೂರಾದರು ರೈತರ ಹೆಸರಿಗೆ ಇಲ್ಲದ ಪಹಣಿಗಳನ್ನು ದರಖಾಸ್ತು ಪೋಡಿಯಡಿ ಸರಿಪಡಿಸಿ ವಿತರಿಸುವ ಕೆಲಸವಾಗಬೇಕು ಎಂದರು.

ಸರ್ಕಾರಿ ಜಮೀನು ಸಂರಕ್ಷಿಸುವ ಲ್ಯಾಂಡ್ ಬೀಟ್ ಕಾರ್ಯಕ್ಕೆ ಚುರುಕು ನೀಡಬೇಕು. ಕಂದಾಯ‌ ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣಗಳನ್ನು ತ್ವರಿತವಾಗಿ‌ ವಿಲೇವಾರಿ ಮಾಡಬೇಕು ಎಂದು ತಹಶಿಲ್ದಾರರಿಗೆ ಡಿಸಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಉಪ ತಹಶೀಲ್ದಾರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News