ಕಲಬುರಗಿ| ಬೀದಿ ನಾಯಿಗಳ ಸ್ಥಳಾಂತರ; ಪಾಲಿಕೆ, ಶಾಸಕರ ವಿರುದ್ಧ ಪ್ರತಿಭಟನೆ
ಕಲಬುರಗಿ: ನಗರದ ಬೀದಿ ನಾಯಿಗಳನ್ನು ಹೊರವಲಯದ ಉದನೂರ ಗ್ರಾಮದ ಸಮೀಪ ಸ್ಥಳಾಂತರಿಸುತ್ತಿರುವುದನ್ನು ಖಂಡಿಸಿ, ಉದನೂರ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ದಕ್ಷಿಣ ಮತಕ್ಷೇತ್ರದ ಶಾಸಕ, ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಅಧಿಕಾರಿಗಳಿಗೆ ಘೇರಾವ್ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಉದನೂರು ಗ್ರಾಮಕ್ಕೆ ಬೀದಿ ನಾಯಿಗಳ ಸ್ಥಳಾಂತರಕ್ಕೆ ಶಾಸಕರು, ಮಹಾಪೌರರ ಕುಮ್ಮಕ್ಕಿದೆ. ಹಾಗಾಗಿ ಯಾವುದೇ ತರಹದ ನಾಯಿಗಳನ್ನು ಗ್ರಾಮದಲ್ಲಿ ಬಿಡಬಾರದು. ಒಂದು ವೇಳೆ ತಂದು ಬಿಟ್ಟರೆ ಮುಂದಿನ ಸಮಸ್ಯೆಗಳಿಗೆ ನೀವೇ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗ್ರಾಮಕ್ಕೆ ಬಂದಿದ್ದ ನಾಯಿಗಳಿರುವ ವಾಹನವನ್ನು ಪ್ರತಿಭಟನಾಕಾರರು ತಡೆದಿದ್ದಾರೆ.
ಈ ಸಂದರ್ಭದಲ್ಲಿ ಶಿವಪುತ್ರಪ್ಪ ಮಾಲಿಪಾಟೀಲ್, ಶಾಂತಕುಮಾರ್ ಬಿರಾದಾರ, ರವಿ ಪಾಟೀಲ್, ವಿಶ್ವನಾಥ್ ಪಾಟೀಲ್, ಹನಮಂತ್ರಾಯ ಕಪನೂರ, ಹಜರತ್ ಸಾಬ್, ಶುಭಾಷ್ ಚಂದ್ರ ಮುಲಗೆ, ವಿಠಲ ಚವಾಣ್, ಬಸವರಾಜ, ಸತೀಶ್, ಮಲ್ಲಿಕಾರ್ಜುನ್, ಶಿವಪುತ್ರಪ್ಪ ಪಾಟೀಲ್, ಬಿಮಣ್ಣ ಶೇರಿಕರ, ರೇವಣಸಿದ್ಧ ದುದನಿ, ಪ್ರಸನ್ನ ಸೇರಿಕರ್, ಮಾಂತೇಶ್ ಪಾಟೀಲ್, ಶರಣು, ಗುಂಡು ಪೂಜಾರಿ, ಗುಂಡು ದೇವಣ್ಣ್ಣ ಗಾವ್, ಜೈಭಿಮು ಕೊರಲ್ಳಿ, ರಾಣಪ್ಪ ಕೋರಳ್ಳಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.