ಕಲಬುರಗಿ | ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಇಬ್ಬರು ಮಹಿಳೆಯರ ಬರ್ಬರ ಹತ್ಯೆ
Update: 2024-04-07 16:10 IST
ಕಲಬುರಗಿ : ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರು ಮಹಿಳೆಯರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದರುವ ಘಟನೆ ನಗರದ ಹೊರ ವಲಯದ ತಾವರಗೇರಾ ಬಳಿ ವರದಿಯಾಗಿದೆ.
ಕೆಕೆ ನಗರದ ನಿವಾಸಿ ಶರಣಮ್ಮ(47) ಮತ್ತು ತಾಜ್ ಸುಲ್ತಾನ್ ಪುರ ನಿವಾಸಿ ಚಂದಮ್ಮ(49) ಹತ್ಯೆಯಾದ ಮಹಿಳೆಯರು ಎಂದು ಗುರುತಿಸಲಾಗಿದೆ. ನಗರದ ಗಂಜ್ ನಿಂದ ಬಸ್ ನಲ್ಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಪ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.