×
Ad

ಕಲಬುರಗಿ | ಇಂದಿನ ಸಮಾಜವನ್ನು ನೋಡಿದಾಗ ಮೌಲ್ಯ ಕಳೆದುಕೊಳ್ಳುತ್ತಿರುವ ಭಯ ಕಾಡುತ್ತಿದೆ : ಡಾ.ಮೋಹನ್‌ ಆಳ್ವ ಕಳವಳ

Update: 2025-02-01 16:53 IST

ಕಲಬುರಗಿ : ಇಂದಿನ ಸಮಾಜವನ್ನು ನೋಡಿದಾಗ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಭಯ ಕಾಡುತ್ತಿದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್‌ ಆಳ್ವ ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ ʼಸಾಂಸ್ಕೃತಿಕ ಸಂವಾದʼದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದು ಹೋದ ಬಾಲ್ಯ ಸ್ಮರಣೀಯವಾಗಿತ್ತು. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ನಾಗರಿಕ ಸಮಾಜ ಎತ್ತ ಕಡೆ ಸಾಗುತ್ತಿದೆ ಎಂಬುದು ಪ್ರಶ್ನಾರ್ಹವಾಗಿದೆ. ಇಂದಿನ ದಿನಗಳಲ್ಲಿ ಕನ್ನಡದ ಶಾಲೆಗಳು ದುಸ್ಥಿತಿಗೆ ಬಂದು ಕನ್ನಡಕ್ಕೆ ದೊಡ್ಡ ಅಪಾಯ ಸೃಷ್ಠಿಯಾಗಿದೆ. ಕನ್ನಡ ಮಾಧ್ಯಮದ ಆದರ್ಶ ಶಾಲೆಗಳು ಖಾಸಗಿ ರಂಗದಲ್ಲಿ ತಲೆ ಎತ್ತಬೇಕಾಗಿದೆ.

ಸಿಬಿಎಸ್, ಐಸಿಎಸ್ ಮಾದರಿಯ ಕನ್ನಡ ಶಾಲೆಗಳು ಸಮಾಜದಲ್ಲಿ ಹೆಚ್ಚೆಚ್ಚು ಬರಬೇಕಾಗಿದೆ. ಹಿಂದಿನ ಕಾಲದಲ್ಲಿ ಸಮಾಜದ ಜನರು ಕನ್ನಡ ಶಾಲೆ ತೆರೆಯಲು ಸ್ಥಳಗಳನ್ನು ಕೊಟ್ಟರು. ಶಾಲೆಗಳನ್ನು ಕಟ್ಟಿದ್ದರು. ಆದರೆ ಈಗ ಶಿಕ್ಷಣದ ರಂಗದ ಪರಿಸ್ಥಿತಿಯೇ ಬದಲಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಾವು ಪಡೆಯುವ ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಎನ್ನುವ ಮನೋಭಾವದಿಂದ ಹೊರ ಬಂದು ಬದುಕಿನ ಮೌಲ್ಯಗಳನ್ನು ಗಟ್ಟಿಗೊಳಿಸಿ ಸಮಾಜಮುಖಿಗಳಾಗಿ ಬದುಕಬೇಕಾಗಿದೆ. ಜ್ಞಾನ ಸಂಪಾದನೆಯ ಜತೆಗೆ ಮಾನವೀಯ ಮ್ವಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಶಿಕ್ಷಣದ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.

ಡಾ.ಸದಾನಂದ ಪೆರ್ಲ, ಸಂಜೀವ ಗುಪ್ತಾ, ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಡಾ.ರೆಹಮಾನ್ ಪಟೇಲ್ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಶಿವಲೀಲಾ ಕಲಗುರ್ಕಿ, ವಿಶಾಲಾಕ್ಷೀ ಮಾಯಣ್ಣವರ್, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ಎಸ್.ಎಸ್.ಹಿರೇಮಠ, ಡಾ.ಎಸ್.ಎಸ್.ಗುಬ್ಬಿ, ಬಿ.ಎಸ್.ದೇಸಾಯಿ, ಗಣೇಶ ಚಿನ್ನಾಕಾರ, ಮಹ್ಮದ್ ಅಯಾಜೋದ್ದೀನ್ ಪಟೇಲ್, ರಾಜಶೇಖರ ಶ್ಯಾಮಣ್ಣ, ಶಿವಾನಂದ ಮಠಪತಿ, ಕಲ್ಲಣ್ಣಗೌಡ್ರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಗಮನ ಸೆಳೆದ ಸಂವಾದ :

ನುಡಿಸಿರಿಯoತಹ ಬೃಹತ್ ಕಾರ್ಯಕ್ರಮ ಸಹಕಾರಗೊಳ್ಳಲು ಹೇಗೆ ಸಾಧ್ಯ ಎಂಬ ಸಿದ್ಧಲಿಂಗ ಬಾಳಿ ಅವರ ಪ್ರಶ್ನೆಗೆ ಉತ್ತರಿಸಿದ ಡಾ.ಮೋಹನ ಆಳ್ವ ಅವರು, ಎಲ್ಲವನ್ನು ಸಹಕಾರ ಮಾಡಬೇಕೆಂದೇನಿಲ್ಲ ಖಾಸಗಿ ರಂಗದಲ್ಲೂ ಮಾಡಬಹುದು ಎಂಬುದೇ ದೊಡ್ಡ ಸತ್ಯ. ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ನೆನಪಿಗಾಗಿ ನುಡಿಸಿರಿ ನಿರಂತರ ನಡೆಯುತ್ತಿದೆ. ಹದಿನೇಳು ನುಡಿಸಿರಿ ಕಾರ್ಯಕ್ರಮಗಳು ನಡೆಸಿ ಕನಿಷ್ಠ 70 ಸಾವಿರ ಜನರು ಪಾಲ್ಗೊಂಡರು. ವ್ಯಾಪಾರಿ ದೃಷ್ಠಿ ಇಲ್ಲ ಸಂಸ್ಕೃತಿಯ ಬೆಳವಣಿಗೆಗೆ ಎಂದರು.

ವಿದ್ಯಾರ್ಥಿನಿ ಭೂಮಿಕಾ ಅವರ ವಾಸ್ತವ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನ ಜೊತೆಗೆ ಮಾತನಾಡುವ ಖುಷಿ. ಸಮಾಜದ ಒಳ್ಳೆಯ ಕೆಲಸಗಳಿಗೆಲ್ಲ ಖುಷಿ ಪಡುತ್ತೇನೆ. ಕೆಲವೊಮ್ಮೆ ಅಹಿತಕರ ಘಟನೆ ನೋಡಿದಾಗ ದು:ಖ ಎನಿಸುತ್ತದೆ ಎಂದರು.

ಇನ್ನೋರ್ವ ವಿದ್ಯಾರ್ಥಿನಿ ವೈಷ್ಣವಿ ಕೇಳಿದ ಪ್ರಶ್ನೆಗೆ ತತ್ಕ್ಷಣ ಉತ್ತರಿಸಿದ ಅವರು, ಬಯಲು ಶಾಲೆಯೇ ನನಗೆ ಪ್ರೇರಣೆ. ನನಗೆ ರೋಲ್ ಮಾಡಲ್ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರೆ ಹೆಗ್ಗಡೆಯವರು ಎಂದರು.

ಸoಗೀತಾ ಕುಲಕರ್ಣಿ, ಎಸ್.ಎಸ್.ಹಿರೇಮಠ ಸೇರಿದಂತೆ ಅನೇಕರ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರ ನೀಡಿ ಎಲ್ಲರ ಗಮನ ಸೆಳೆದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News