ಕಲಬುರಗಿ | ಕೋವಿಡ್ ವ್ಯಾಕ್ಸಿನ್‌ಗೂ ಹೃದಯಘಾತಕ್ಕೂ ಯಾವುದೇ ಸಂಬಂಧವಿಲ್ಲ : ಡಾ.ಇಂದಿರಾ ಶಕ್ತಿ
Update: 2025-07-11 22:43 IST
ಕಲಬುರಗಿ: ಕೋವಿಡ್ ವ್ಯಾಕ್ಸಿನ್ ಗೂ ಹೃದಯಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಲ್ಲೇಶಪ್ಪ ಮಿಣಜಗಿ ಪ್ರತಿಷ್ಠಾನ ಸಂಸ್ಥಾಪಕಿ, ಪ್ರಸೂತಿ ಸ್ತ್ರೀರೋಗ ತಜ್ಞ ಡಾ.ಇಂದಿರಾ ಶಕ್ತಿ ಹೇಳಿದರು.
ನಗರದ ಗಾಜಿಪುರ ಅತ್ತರ್ ಕಾಂಪೌದಲ್ಲಿ ಶ್ರೀ ಹಿಂಗುಲಾಂಬಿಕ ಶಿಕ್ಷಣ ಸಂಸ್ಥೆಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮಲ್ಲೇಶಪ್ಪ ಮಿಣಜಗಿ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಆಸ್ಪತ್ರೆಯ ಅಧೀಕ್ಷಕಿಯಾದ ಡಾ.ವಿಜಯಲಕ್ಷ್ಮಿ ಹರನುರ್ಕರ್ ಮಾತನಾಡಿದರು. ಶಿಬಿರದಲ್ಲಿ ಡಾ.ಶರಣಕುಮಾರ ಪಾಟೀಲ್, ಡಾ.ಶಿಲ್ಪ ಕಮತ್ ಅವರು ತಪಾಸಣೆ ನಡೆಸಿದರು.