×
Ad

ಕಲಬುರಗಿ | ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕು: ಎಂಎಲ್‌ಸಿ ಶಶೀಲ್‌ ನಮೋಶಿ

Update: 2025-06-01 18:58 IST

ಕಲಬುರಗಿ: ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.

ರವಿವಾರ ನಗರದ ಪೂಜಾರಿ ಚೌಕ್‌ನಲ್ಲಿ ಕಲ್ಯಾಣ ಕರ್ನಾಟಕ ಸರಕಾರಿ ನೌಕರರ ಸಂಘದ ಜಿಲ್ಲಾ ಕಚೇರಿಯನ್ನು ಉದ್ಘಾಟಸಿ ಮಾತನಾಡಿದ ಶಶೀಲ್ ನಮೋಶಿ, ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕು, ಮಕ್ಕಳು ಉತ್ತಮ ಅಂಕ ಗಳಿಸುವುದರ ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು. ಸಂಘಟನೆಗಳು ಸಮಾಜದ ಬೆನ್ನೆಲುಬಾಗಿ ನಿಂತು ಸಮಾನತೆ ಮತ್ತು ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಈ ವೇಳೆ ಸಂಘದ ಗೌರವಾಧ್ಯಕ್ಷ ಅನಿಲಕುಮಾರ್ ಬಿರಾದಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ರವಿ ಡೊಳೆ ಪದಾಧಿಕಾರಿಗಳಿಗೆ ಆದೇಶ ಪ್ರತಿ ವಿತರಿಸಿ ಸಂಘಟನೆ ಬಲಪಡಿಸಿ ನಮ್ಮ ಭಾಗದಲ್ಲಿ ನೌಕರರ ಹಿತ ರಕ್ಷಣೆ ಮಾಡುವಂತೆ ಕೇಳಿಕೊಂಡರು. 

ಈ ವೇಳೆ ಕಲ್ಯಾಣ ಕರ್ನಾಟಕ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ,  ಜಿಲ್ಲಾ ಸಂಘದ ಶ್ರೀನಿವಾಸ್ ಗುತ್ತೇದಾರ್, ಅಂಬಿಕಾ ತಡಕಲ್, ಹೈದರ್ ಅಲಿ, ಅಣವೀರಪ್ಪ ಯಾಕಾಪುರ್, ಗಂಗಾಧರ್ ಮ್ಯಾಕೇರಿ, ಪ್ರಭು ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News