×
Ad

ಕಲಬುರಗಿ | ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

Update: 2024-06-27 22:51 IST

ಕಲಬುರಗಿ : ಮನೆಯಿಂದ ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ಗುರುವಾರ ರಾವೂರ ಸುಣ್ಣದ ಕಲ್ಲಿನ ಗಣಿಯೊಂದರ ನೀರಿನ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾವೂರ ಗ್ರಾಮದ ನಿವಾಸಿಗಳಾದ ರವಿ ಗುತ್ತೆದಾರ ಅವರ ಮಗ ಭುವನ್ (6) ಮತ್ತು ಅಶೋಕ ಬೇಟಗೆರಿ ಅವರ ಮಗ ದೇವರಾಜ (7), ಮೃತ ಬಾಲಕರು. ರಾವೂರಿನ ಸಿದ್ಧಲಿಂಗೇಶ್ವರ ದೇವಸ್ಥಾನದ ರಥ ಬೀದಿಯಿಂದ ಸ್ವಲ್ಪವೇ ದೂರದಲ್ಲಿದ್ದ ಸುಣ್ಣದ ಕಲ್ಲಿನ ಗಣಿಯ ಹಳ್ಳದಲ್ಲಿ ಈಜಾಡಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಸಂಜೆಯಿಂದಲೇ ಪೋಷಕರು ಹುಡುಕಲಾರಂಭಿಸಿದ್ದು, ಗುರುವಾರ ಸುಣ್ಣದ ಕಲ್ಲಿನ ಗಣಿಯ ಪಕ್ಕದಲ್ಲಿರುವ ಬಾಲಕರ ಚಪ್ಪಲಿಯನ್ನು ಗುರುತಿಸಿ, ಪೊಲೀಸರ ಸಮ್ಮುಖದಲ್ಲಿ ನೀರಿಗೆ ಇಳಿದು ಹುಡುಕಿದಾಗ ಮೃತದೇಹ ಪತ್ತೆಯಾಗಿವೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News