×
Ad

ಕಲಬುರಗಿ | ಗುಣಮಟ್ಟದ ಆಹಾರಕ್ಕೆ ಒತ್ತಾಯಿಸಿ ಕೈದಿಗಳ ಉಪವಾಸ

Update: 2024-10-16 18:53 IST

ಕಲಬುರಗಿ : ಇಲ್ಲಿನ ಹೊರವಲಯದಲ್ಲಿ ಇರುವ ಕೇಂದ್ರ ಕಾರಾಗೃಹದಲ್ಲಿ ಗುಣಮಟ್ಟ ಆಹಾರ ನೀಡುವಂತೆ ಒತ್ತಾಯಿಸಿ ಕೈದಿಗಳು ಬುಧವಾರ ಬೆಳಿಗ್ಗೆಯಿಂದ ಉಪವಾಸ ಆಚರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿಗಷ್ಟೇ ಮೊಬೈಲ್, ಗಾಂಜಾ ಮತ್ತಿತರ ಪದಾರ್ಥಗಳು ಪತ್ತೆಯಾಗಿ‌, ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕೈದಿಗಳಿಗೆ ಗುಣಮಟ್ಟ ಆಹಾರ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಜೈಲಿನಲ್ಲಿ ಊಟ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪದ ಮಧ್ಯೆ, ಕೈದಿಗಳು ಬೆಳಗ್ಗೆಯಿಂದಲೇ ಊಟ ಸೇವನೆ ನಿರಾಕರಿಸಿರುವ ಪ್ರಸಂಗವೂ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಜೈಲಿನ ಅಧಿಕಾರಿಗಳಿಗೆ ಸಂಪರ್ಕಿಸಿದರೆ, ʼಜೈಲಿನಲ್ಲಿ ಕೈದಿಗಳು ಉಪವಾಸ ಇರುವ ಬಗ್ಗೆ ನಿಮಗೆ ಬಂದಿರುವ ಮಾಹಿತಿ ಸುಳ್ಳು ಆಗಿದ್ದು, ನೂತನ ಜೈಲು ಅಧೀಕ್ಷಕರು ಈ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾರೆʼ ಎಂದು ಕೇಂದ್ರ ಕಾರಾಗೃಹದ ಜೈಲರ್ ಪ್ರತಿಕ್ರಿಯೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News