ಕಲಬುರಗಿ ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ
Update: 2025-02-10 15:29 IST
ಕಲಬುರಗಿ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ಮಾದಾರ ಚನ್ನಯ, ಮದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಕಾಯಕ ಶರಣರ ಜಯಂತಿ ಸೋಮವಾರದಂದು ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕಾಯಕಶರಣರ ಅಧ್ಶಕ್ಷರುಗಳಾದ ಶಂಕರಕೊಡ್ಲಾ, ರುದ್ರಪ್ಪ ಎಸ್ ಹೊಳಕುಂದ, ಕಾಶಿರಾಯ್ ನಂದರೂಕರ್, ರಮೇಶ್ ಹೊಸಮನಿ , ಸಾಯಬಣ್ಣ, ಹೊಳಕಾರ್ ಪ್ರೊ.ಶಿವರಾಜ್ ಪಾಟೀಲ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ದತ್ತಪ್ಪ ಸಾಗನೂರ,ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.