×
Ad

ಕಲಬುರಗಿ: ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

Update: 2025-08-12 19:21 IST

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್ಆರ್ ರಂಗನಾಥ್ ರವರ 133ನೇ ಜನ್ಮದಿನ ಹಾಗೂ ಗ್ರಂಥಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ ಎಸ್ ಆರ್ ಪಾಟೀಲರು ಹಾಗೂ ಅತಿಥಿಗಳಾಗಿ ಡಾ. ಭಾರತಿ ಹರಸೂರ, ಡಾ.ಶ್ರೀದೇವಿ ಸೋಮ ಪರೀಕ್ಷಾ ನಿಯಂತ್ರಣ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯ ಗ್ರಂಥಪಾಲಕರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ, ಡಾ.ಎಸ್ ಆರ್ ರಂಗನಾಥನ್ ರವರ ಜೀವನ ಸಾಧನೆ ಹಾಗೂ ಗ್ರಂಥಾಲಯ ಶಿಕ್ಷಣವನ್ನು ವಿಶ್ವವಿದ್ಯಾಲಯಗಳಲ್ಲಿ,ಗ್ರಂಥಾಲಯ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲು ಅವರು ಪ್ರಯತ್ನವೇ ಕಾರಣವೆಂದರು.

ಅತಿಥಿಗಳಾಗಿ ಭಾಗಿಯಾದ ಭಾರತಿ ಹರಸೂರ ಮಾತನಾಡಿ, ಗ್ರಂಥಾಲಯಗಳಲ್ಲಿರುವ ಮಾಹಿತಿ ಸಂಪನ್ಮೂಲಗಳನ್ನು ಪ್ರಕಟಿತ ಹಾಗೂ ಡಿಜಿಟಲ್ ಮಾಧ್ಯಮದ ಮುಖಾಂತರ ಓದುಗರ ಜ್ಞಾನ ಅಭಿವೃದ್ಧಿಗೆ ನಮ್ಮ ಕಾಲೇಜಿನ ಗ್ರಂಥಾಲಯದ ಸಿಬ್ಬಂದಿಯವರು ಬಹಳ ಕಾಳಜಿಯಿಂದ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಡಾ. ಎಸ್. ಆರ್.ಪಾಟೀಲ ಮಾತನಾಡಿ, ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಂಥಾಲಯಗಳು ಓದುಗರ ಜ್ಞಾನಾರ್ಜನೆಗೆ ಮಹತ್ತರ ಪಾತ್ರ ವಹಿಸಿ,ಓದುಗನಿಗೆ ಬೇಕಾದ ಮಾಹಿತಿಯನ್ನು ತೀವ್ರಗತಿಯಲ್ಲಿ ಒದಗಿಸಿದಾಗ ಓದುಗ ಗ್ರಂಥಾಲಯದ ಸೇವೆಯನ್ನು ಪಡೆಯಲು ಹೆಚ್ಚಿನ ನೆರವನ್ನು ನೀಡಿದಂತಾಗುತ್ತದೆ. ವರ್ಷದಿಂದ ವರ್ಷಕ್ಕೆ ನಾವು ಓದುಗರ ಅಭಿರುಚಿಗೆ ತಕ್ಕಂತೆ ಗ್ರಂಥಗಳನ್ನು ಅವುಗಳು ಪ್ರಕಟಿತ ಮಾಧ್ಯಮದಲ್ಲಿರಲಿ ಅಥವಾ ಡಿಜಿಟಲ್ ಮಾಧ್ಯಮದಲ್ಲಿರಲಿ ಅವುಗಳನ್ನು ಖರೀದಿಸಲು ಗ್ರಂಥಾಲಯಕ್ಕೆ ಎಲ್ಲಾ ತರಹದ ಸಹಕಾರ ನೀಡುವದಾಗಿ ಹೇಳಿದರು.

ಕಾರ್ಯಕ್ರಮದ ನಿರೂಪಣೆಯನ್ನು ಗ್ರಂಥಪಾಲಕರಾದ ಡಾ.ಸಾವಿತ್ರಿ ಪಟ್ಟಣ ಹಾಗೂ ಗ್ರಂಥಪಾಲಕರಾದ ಡಾ.ಮಮತಾ ಮೇಳಕುಂದಿರವರು ವಂದಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು ಅಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯ ಸಿಬ್ಬಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News