ಕಲಬುರಗಿ ಮಹಾನಗರ ಪಾಲಿಕೆಗೆ ಲೋಕಾಯುಕ್ತ ದಾಳಿ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ಕಲಬುರಗಿ ಲೋಕಾಯುಕ್ತ ಪೊಲೀಸರು ಪಾಲಿಕೆ ಸೇರಿದಂತೆ ವಲಯ ಪಾಲಿಕೆ, ಜೆರಾಕ್ಸ್ ಅಂಗಡಿಗಳಿಗೆ ಮೇಲೆ ದಿಢೀರ್ ದಾಳಿ ನಡೆಸಿ, ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ 80 ಅಧಿಕಾರಿಗಳನ್ನು ಒಳಗೊಂಡ ಏಳು ವಿಶೇಷ ತಂಡಗಳ ನೇತೃತ್ವದಲ್ಲಿ ವಲಯ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ 1, ವಲಯ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ 2, ವಲಯ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ 3, ಮಿನಿ ವಿಧಾನಸೌಧ ರಸ್ತೆಯಲ್ಲಿರುವ ಸ್ನೇಹ ಬಿಲ್ಡರ್ಸ್ ರಿಯಲ್ ಸ್ಟೇಟ್ ಸೆಂಟರ್, ಜಗತ್ ವೃತ್ತದ ಸಮೀಪದ ಎಸ್. ಬಿ .ಬಿಲ್ಡಿಂಗ್ ಪ್ಲ್ಯಾನ್, ಪಾಲಿಕೆಯ ಕಟ್ಟಡದ ಆವರಣದ ಜೆರಾಕ್ಸ್ ಮತ್ತು ಡಿಟಿಪಿ ಸೆಂಟರ್, ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಸೂಕ್ತ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ವೇಳೆಯಲ್ಲಿ ಮಹಾನಗರ ಪಾಲಿಕೆಯ ವಲಯ ಆಯುಕ್ತರು, ಸರ್ಕಾರಿ ಪಂಚರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಶೋಧನೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.