×
Ad

ಬೆಂಕಿ ಅವಘಡ ಸ್ಥಳಕ್ಕೆ ಶಾಸಕ ಡಾ.ಅಜಯ್‍ಸಿಂಗ್ ಭೇಟಿ : ಸೂಕ್ತ ಪರಿಹಾರ ಕೊಡಿಸುವ ಭರವಸೆ

Update: 2025-02-03 19:37 IST

ಕಲಬುರಗಿ : ಜೇವರ್ಗಿ ಪಟ್ಟಣದ ಬುಟ್ನಳ ರಸ್ಥೆಯಲ್ಲಿರುವ ಫರ್ನಿಚರ್ ಅಂಗಡಿಗಳಿಗೆ ಜ.27 ರಂದು ಬೆಂಕಿ ಅವಘಡಕ್ಕೆ ಸುಮಾರು 8 ಅಂಗಡಿಗಳು ಸುಟ್ಟು ಕರಕಲಾದ ಘಟನಾ ಸ್ಥಳಕ್ಕೆ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಕ್ಷೇತ್ರದ ಶಾಸಕ ಡಾ.ಅಜಯಸಿಂಗ್ ಭೇಟಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಷಿನರಿ ಹಾಗೂ ಕಟ್ಟಿಗೆಗಳು ಬೆಂಕಿಗೆ ಆಹುತಿಯಾಗಿದ್ದು, ಪರಿಶೀಲನೆ ನಡೆಸಿ ನೊಂದ ಕುಟುಂಬಗಳಿಗೆ ಧೈರ್ಯ ತುಂಬಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸಲು ಪ್ರಯತ್ನಿಸುತ್ತೆನೆ ಎಂದು ಅಂಗಡಿ ಮಾಲಕರಿಗೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಬೆಂಕಿ ಅವಘಡದಲ್ಲಿ ವಿಶ್ವರಾಜ ವಿಶ್ವಕರ್ಮ, ಮೋಹನ ಬಡಿಗೇರ, ವಿಶ್ವರಾಜ ವಿಶ್ವಕರ್ಮ, ಶಿವಕುಮಾರ ವಿಶ್ವಕರ್ಮ, ಶ್ರೀಶೈಲ ವಿಶ್ವಕರ್ಮ ಸೇರಿದಂತೆ ಇನ್ನು ಮೂರ್ನಾಲ್ಕು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಪಿಎಸ್ಐ ಗಜಾನಂದ ಬಿರಾದರ, ರಾಜಶೇಖರ ಸೀರಿ, ಸಿದ್ಲಿಂಗರೆಡ್ಡಿ ಇಟಗಾ, ರುಖುಂಪಟೇಲ್ ಇಜೇರಿ, ರಮೇಶ ಮಾವನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News