×
Ad

ವಸತಿ ನಿಗಮದ ಕುರಿತ ನನ್ನ ಹೇಳಿಕೆಗೆ ಮತ್ತಷ್ಟು ಶಾಸಕರ ಬೆಂಬಲ: ಶಾಸಕ ಬಿ.ಆ‌ರ್. ಪಾಟೀಲ್

Update: 2025-06-23 19:55 IST

ಕಲಬುರಗಿ: ವಸತಿ ನಿಗಮದಲ್ಲಿ ಹಣ ನೀಡಿದವರಿಗೆ ಮನೆ ಎಂಬ ನನ್ನ ಹೇಳಿಕೆಗೆ ಮತ್ತಷ್ಟು ಶಾಸಕರು ಬೆಂಬಲಿಸಲಿದ್ದಾರೆ, ಸ್ವಲ್ಪ ಕಾದು ನೋಡಿ ಎಂದು ಆಳಂದ ಶಾಸಕ ಬಿ.ಆ‌ರ್.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕರು ಫೋನ್ ಮಾಡಿ ತಿಳಿಸಿದ್ದಾರೆ. ಇನ್ನೂ ಹಲವರು ಬಹಿರಂಗವಾಗಿ ತಮ್ಮ ಮಾತಿಗೆ ಧ್ವನಿಗೂಡಿಸಲಿದ್ದಾರೆ. ತಾವು ಹೇಳಿರುವಂತೆ ತಮ್ಮ ಕ್ಷೇತ್ರದಲ್ಲೂ ಆಗಿದೆ ಎಂದು ನನ್ನ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕ ರಾಜು ಕಾಗೆ ಅವರು ಸಹ ಹೇಳಿದ್ದಾರೆ. ಇದಕ್ಕೆ ಇನ್ನಷ್ಟು ಅಸಮಾಧಾನ ಶಾಸಕರೂ ಧ್ವನಿಗೂಡಿಸಲಿದ್ದಾರೆ ಎಂದರು.

ವಸತಿ ಇಲಾಖೆಯಲ್ಲಿ ಹಣ ನೀಡಿದವರಿಗೆ ಮನೆ ಎಂಬುದರ ಕುರಿತಾಗಿ ತಾವು ಪ್ರಸ್ತಾಪಿಸಿರುವುದರಕ್ಕಿಂತ ಇನ್ನೂ ದೊಡ್ಡ ಕಥೆಯಿದೆ. ಈಗ ಹೇಳಲು ಸಮಯವಿಲ್ಲ, ನಾನು ಕದನ ಭೂಮಿಯಿಂದ ಓಡಿ ಹೋಗುವನಲ್ಲ. ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ. ರಾಜೀವ್ ಗಾಂಧಿ ವಸತಿ ನಿಗಮದ ಹಗರಣದ ಆರೋಪದಿಂದ ಹಿಂದೆ ಸರಿಯಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಜೂ.25ರಂದು ಸಂಜೆ ಸಿಎಂರನ್ನು ಭೇಟಿಯಾಗಿ ಮಾತುಕತೆ:

ಸಿಎಂ ಸಿದ್ದರಾಮಯ್ಯ ಅವರು ರವಿವಾರದಂದು ಕರೆ ಮಾಡಿ ನನಗೆ ಸೋಮವಾರದಂದು ರಾಯಚೂರಿಗೆ ಬರಲು ಹೇಳಿದ್ದರು. ಆದರೆ, ಅಲ್ಲಿಗೆ ನನಗೆ ಆಹ್ವಾನವಿಲ್ಲ ನಾನು ಬರಲ್ಲ ಎಂದು ಹೇಳಿದ್ದೇನೆ. ದೆಹಲಿಗೆ ಹೋಗಿ ಬಂದು ನಿಮ್ಮನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದಾರೆ. ಜೂ.25 ರಂದು ಬುಧವಾರ ಸಂಜೆ ಸಿಎಂರನ್ನು ಭೇಟಿ ಮಾಡಿ ಅವರೊಂದಿಗೆ ಮುಕ್ತವಾಗಿ ಚರ್ಚಿಸುತ್ತೇನೆ ಎಂದರು.

ಎಂ.ವೈ.ಪಾಟೀಲ್ ಉಲ್ಟಾ ಹೊಡೆದಿದ್ದಾರಂತೆ.!

ಎಂ.ವೈ ಪಾಟೀಲ್ ಏನೋ ಉಲ್ಟಾ ಹೊಡಿದ್ದಿದ್ದಾರೆ ಅಂತೇ, ತಮ್ಮ ಕ್ಷೇತ್ರದಲ್ಲಿ ಏನು ಆಗಿಲ್ಲವೆಂದು ಹೇಳಿದ್ದಾರಂತೆ. ಆದರೆ, ಅವರ ಕ್ಷೇತ್ರದ ಜನರು ನನಗೆ ಕರೆ ಮಾಡಿದ್ದಾರೆ ಎಂದು ಕರೆ ಮಾಡಿದವರ ಲಿಸ್ಟ್ ಓದಿದರು. ಇದೇ ವೇಳೆ ಬಿ‌‌.ಆರ್.ಪಾಟೀಲ್ ಪಕ್ಕದಲ್ಲಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಸಹ ಅಸಮಾಧಾನ ವ್ಯಕ್ತಿಪಡಿಸಿ, ನನಗೂ ಮಾಹಿತಿ ಇಲ್ಲದೆ‌, ನನ್ನ ಕ್ಷೇತ್ರದಲ್ಲೂ ಕೆ.ಆರ್.ಐ.ಡಿ.ಎಲ್ ಕೈಗೊಳ್ಳುವ ಕಾಮಗಾರಿ ಉದ್ಘಾಟನೆಯಾಗುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News