×
Ad

ಕಲಬುರಗಿ: ಪ್ರಾದೇಶಿಕ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Update: 2024-11-01 15:06 IST

ಕಲಬುರಗಿ: ಇಲ್ಲಿನ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕ ಧನರಾಜ್ ಬೋರಾಳೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿ ಕನ್ನಡ ಏಕೀಕರಣದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು, ಡಾ.ರಾಜು ಕಂಬಳಿಮಠ, ಸಂತೋಷ ಎನ್. ಆಡಳಿತ ಮತ್ತು ಲೆಕ್ಕಾಧಿಕಾರಿ ಸಾಕ್ಷಿ ಪಾಟೀಲ್, ವ್ಯವಸ್ಥಾಪಕ ಪ್ರಶಾಂತ ಅಂಗಡಿ, ಸಿಬ್ಬಂದಿ ಅರ್ಚನಾ ಪಾಟೀಲ್ ಅಶ್ವೀನಿ ಪೂಜಾರಿ, ಶಾಂತಪ್ಪ, ಪ್ರಶಾಂತ, ನಾಗರಾಜ, ನೀತಿನ್ ಪಾಟೀಲ್, ನಿಂಗಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News