×
Ad

ಸಮಾಜ ಕಾರ್ಯದ ಮೂಲಕ ಆದರ್ಶ ಜೀವನ ಕಟ್ಟಿಕೊಳ್ಳಿ: ಸಿದ್ಧರಾಮ ಮೇತ್ರೆ ಕರೆ

Update: 2025-01-20 09:57 IST

ಕಲಬುರಗಿ: ಸಮಾಜ ಕಾರ್ಯದ ಮೂಲಕ ಆದರ್ಶ ಜೀವನ ಕಟ್ಟಿಕೊಳ್ಳಬೇಕು. ಡಿಜಿಟಲ್ ಯುಗದಲ್ಲಿ ಸಮುದಾಯದ ಮಕ್ಕಳನ್ನು ಶಿಕ್ಷಣ, ಸಂಸ್ಕಾರದೊoದಿಗೆ ಸಮಾಜದ ಸಂಪತ್ತು ಮತ್ತು ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳಲು ಮುಂದಾಗಬೇಕು ಎಂದು ಮಹಾರಾಷ್ಟ್ರದ ಮಾಜಿ ಗೃ ಸಚಿವ ಸಿದ್ಧರಾಮ ಮೇತ್ರೆ ಅವರು ಮಾಲಗಾರ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಆಳಂದ ಪಟ್ಟಣದ ಲಿಂಗಾಯತ ಭವನದಲ್ಲಿ ಮಾಳಿ ಮಾಲಗಾರ ಶ್ರೇಯೋಭಿವೃದ್ಧಿ ಸಂಘದ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದ 142 ಕೋಟಿ ಜನಸಂಖ್ಯೆಯನ್ನು ಅತ್ಯುತ್ತಮ ಶ್ರೇಣಿಯ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ರೂಪಿಸಲು, ಪ್ರತಿ ಪೌರನು ತನ್ನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಒದಗಿಸಬೇಕಾಗಿದೆ ಎಂದರು.

ಸಾವಿತ್ರಿಬಾಯಿ ಪುಲೆ ಬಡ, ಶೋಷಿತ, ಹಿಂದುಳಿದ ಸಮುದಾಯದ ಉನ್ನತಿಗಾಗಿ ಜೀವನವನ್ನು ಅರ್ಪಿಸಿದ್ದಾರೆ. ಮಹಿಳೆಯರ ಶಿಕ್ಷಣಕ್ಕಾಗಿ ಮಾಡಿದ ಕ್ರಾಂತಿಕಾರಿ ಕಾರ್ಯಗಳು, ಜನಸಾಮಾನ್ಯರಿಗೆ ಹೊಸ ದಾರಿಯನ್ನು ತೋರಿಸಿವೆ. ಇಂತವರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆದರ್ಶಗಳನ್ನು ಪಾಲಿಸುವುದು ಅಗತ್ಯ" ಸಮುದಾಯದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಮಹಿಳಾ ಜೊತೆಗೆ ಗಂಡು ಮಕ್ಕಳ ಶಿಕ್ಷಣದಲ್ಲಿ ಹೂಡಿಕೆಯ ಒತ್ತುಕೊಡಿ, ಇದು ಸಮಾಜದ ಆರ್ಥಿಕ ಸದೃಢತೆಗೆ ಮಾದರಿ ಎಂದರು.

ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ಸಾವಿತ್ರಿಬಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಂಡು ಮಾತನಾಡಿ, ಈ ಹಿಂದೆಯೂ ತಮ್ಮ ನೇತೃತ್ವದಲ್ಲಿ ಮಾಲಗಾರ ಬಾಂಧವರಿಗೆ ರಾಜಕೀಯವಾಗಿ ತಾಪಂ, ಪುರಸಭೆ ಮತ್ತು ಗ್ರಾಪಂಗಳಲ್ಲಿ ಅಧಿಕಾರ ನೀಡಿದಂತೆ ಮುಂದೆಯೂ ಅಧಿಕಾರ ನೀಡಿ ಸಹಕರಿಸಲು ಬದ್ಧನಾಗಿದ್ದಾನೆ, ಶ್ರಮಿಕ ಸಮುದಾಯದ ಮಾಳಿ ಸಮಾಜವು ಕಾಲಘಟದಲ್ಲಿ ತನ್ನ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದ್ದು, ಮತ್ತೆ ತಮ್ಮ ಕಸುಬಿನ ಮೂಲಕ ಆರ್ಥಿಕ ದೃಢತೆಯನ್ನು ಸಾಧಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಶ್ರಮಿಸಬೇಕು. ಸಮಾಜ ಬಾಂಧವರು ಸಾವಿತ್ರಿಭಾಯಿ ಫುಲೆ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಸಮಾಜದ ಮುಖಂಡ ಶ್ರೀಶೈಲ ಮಾಡಿಯಾಳೆ, ವಿಶ್ವನಾಥ ಸರಸಂಬಿ ಮಾತನಾಡಿದರು.

ವೇದಿಕೆಯಲ್ಲಿ ಪಿಯು ಶಿಕ್ಷಣ ಜಂಟಿ ನಿರ್ದೇಶಕ ಶಿವಶರಣಪ್ಪ ಮುಳೇಗಾಂವ, ಕಾಲೇಜು ಜಂಟಿ ನಿರ್ದೇಶಕ ಶಿವಶರಣ ಗೋಳೆ, ಆಳಂದ ಸಾರಿಗೆ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ, ಬೆಂಗಳೂರಿನ ಪಿಎಸ್ ಐ ಬಸವರಾಜ ಜಂದೆ, ಪಿಕೆಪಿಎಸ್ ಅಧ್ಯಕ್ಷ ಬಸವಂತರಾವ್ ಎಸ್. ಧೂಳೆ ಸೇರಿ ನಿವೃತ್ತ ಸೈನಿಕರಿಗೆ ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ಸಾಧಕರಿಗೆ ಸನ್ಮಾನಿಸಲಾಯಿತು.

ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ, ಡಾ. ಮಹಾಂತಪ್ಪ ಹಾಳಮಳಿ, ನಿವೃತ್ತ ತಹಸೀಲ್ದಾರ ಗುರುಬಸಪ್ಪ ಮೇತ್ರೆ, ಸಮಾಜ ಅಧ್ಯಕ್ಷ ಪಂಡಿತ ಎಂ. ಶೇರಿಕಾರ, ದತ್ತರಾಜ ಗುತ್ತೇದಾರ, ಮಾದನಹಿಪ್ಪರಗಾ ಗ್ರಾಪಂ ಅಧ್ಯಕ್ಷೆ ಸುವರ್ಣ ಈ. ಮೈಂದರ್ಗಿ, ಯಳಸಂಗಿ ಗ್ರಾಪಂ ಅಧ್ಯಕ್ಷೆ ಕವಿತಾ ಯಲ್ದೆ, ಸಿದ್ಧರಾಮ ತೋಳನೂರೆ, ಗುರುನಾಥ ಎಂ. ಜಂದೆ, ಸಿದ್ಧರಾಮ ಬಸಣ್ಣ, ಸಿದ್ಧರಾಜ ಆಲೂರೆ, ಸುಭಾಷ್ ಎನ್. ಬಳೂರ್ಗಿ, ಸಂಜುಕುಮಾರ ಉಂಬರಗಿ, ವಿಶ್ವನಾಥ ಕೌಂಟಗಿ, ಈರಣ್ಣ ಎಚ್. ಪಾಟೀಲ, ಸಾಯಿನಾಥ ಎಸ್. ಗೌಡಗಾವಿ, ಚಂದ್ರಕಾoತ ಕೆ. ಬಿಕ್ಕಮಳಿ, ಮಹೇಶ್ ಹೀರೊಳಿ, ವಿಶ್ವನಾಥ ಎ. ಧೂಳೆ, ಮಲ್ಲಿಕಾರ್ಜುನ ವಣದೆ ಮತ್ತಿತರರು ಉಪಸ್ಥಿತರಿದ್ದರು.

ಗಣೇಶ ಪಾಟೀಲ್ ಸ್ವಾಗತಿಸಿದರು. ರಮೇಶ ಗೊಳೆ ನಿರೂಪಿಸಿದರು, ನಾಗೇಂದ್ರ ಚಿಂಚೋಳಿ ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News