×
Ad

ಗಣತಿ ಸಮೀಕ್ಷೆಯಲ್ಲಿ ಜನರ ಆರ್ಥಿಕ ಸ್ಥಿತಿಗತಿ ಮಾನದಂಡವಾಗಿಸಿ: ಪ್ರೊ.ದಯಾನಂದ ಅಗಸರ್

Update: 2025-07-25 11:55 IST

ಕಲಬುರಗಿ: ಪ್ರತಿ ಜಾತಿ/ಜನಾಂಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣಕ್ಕಾಗಿ ಸದರಿ ಗಣತಿಯ ಸಮೀಕ್ಷೆಯಲ್ಲಿ ಆರ್ಥಿಕ ಸ್ಥಿತಿಗತಿಯು ಪ್ರಮುಖ ಮಾನದಂಡವಾಗಬೇಕು. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಗಣಿಸಬೇಕು ಎಂದು ನೂತನವಾಗಿ ರಚಿಸಲಾದ ಜನಕಲ್ಯಾಣ ವೇದಿಕೆಯ ಅಧ್ಯಕ್ಷ, ನಿವೃತ್ತ ಪ್ರೋ.ದಯಾನಂದ ಅಗಸರ್ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಮತ್ತು ಜಾತಿಗಣತಿ ಗೊಂದಲದ ನಿವಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಎಚ್ಚರಿಸಲು ಹೊಸದಾಗಿ ಸಂಘ ರಚಿಸಿ, ವಿವಿಧ ಆಯಾಮಗಳಲ್ಲಿ ಚರ್ಚಿಸಿ ಸಮಾಲೋಚನೆ ಮಾಡಿದ್ದೇವೆ. ಜಾತಿ ಜನಗಣತಿ ಬಗ್ಗೆ ಮಾನದಂಡದ ವರ್ಗೀಕರಣ ಮಾಡಬೇಕು ಎಂದು ಒತ್ತಾಯಿಸಲು ವಿವಿಧ ಆಯಾಮಗಳಲ್ಲಿ ಚರ್ಚಿಸಲಾಗುತ್ತಿದೆ ಎಂದರು.

ಜನಗಣತಿ ಹಾಗೂ ಜಾತಿ ಗಣತಿ ಶಿಕ್ಷಣ ಉದ್ಯೋಗ, ಆರೋಗ್ಯ, ಉದ್ಯೋಗ ಕೃಷಿ ಇತರ ಕ್ಷೇತ್ರಗಳಲ್ಲಿ ಜಾತಿ ಜನಾಂಗದಲ್ಲಿ ಶೇಕಡಾವಾರು ಸೌಲಭ್ಯ ಹಾಗೂ ಮೀಸಲಾತಿಗಳು ಕೇವಲ ಅಗತ್ಯ ಇರುವ ದುರ್ಬಲರಿಗೆ, ಶೋಷಿತರಿಗೆ ಸಿಗುವಂತಾಗಬೇಕು, ಈವರೆಗೆ ಜಾತಿಯ ಆಧಾರಿತವಾಗಿ ಮೀಸಲಾತಿ ಪಡೆದಿರುವವರೆಲ್ಲರೂ ಸರಕಾರಗಳಿಂದ ಅನುಕೂಲತೆಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ಆರ್ಥಿಕ ಸಂಕಷ್ಟದಲ್ಲಿ ಒಳಗಾಗುತ್ತಿರುವ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಾತಿ ಜನಾಂಗವಾರು ಸೌಲಭ್ಯ ಮತ್ತು ಮೀಸಲಾತಿ ಪಡೆಯುವವರನ್ನು ಹೊರತುಪಡಿಸಿ, ಉಳಿದ ಎಲ್ಲ ಜಾತಿ, ಜನಾಂಗಗಳಲ್ಲಿ ಒಂದೊತ್ತಿನ ಊಟಕ್ಕೂ ಗತಿಯಿಲ್ಲದಂತೆ ಕಡು ಬಡವರು ಇದ್ದಾರೆ. ಆರ್ಥಿಕವಾಗಿ ಹಿಂದುಳಿದ ಅಂತಹ ಬಡವರನ್ನು ಗುರುತಿಸಿ ಮೀಸಲಾತಿ ನೀಡಬೇಕಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಎಸ್. ಪಾಟೀಲ್ ನರಿಬೋಳ, ಕೈಲಾಶನಾಥ ದೀಕ್ಷಿತ, ದಯಾನಂದ ಪಾಟೀಲ್, ಸುಧೀರ್ ಉಪಾಧ್ಯ, ಶಾದಾಬ ಫಾತಿಮಾ, ಶಿವಶರಣಪ್ಪ ಹಾಲೋಳಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News