ಔಷಧರಹಿತ ಚಿಕಿತ್ಸೆ ನೀಡುವುದೇ ಫಿಸಿಯೋಥೆರಪಿ: ಡಾ. ಶರಣಬಸವ
ಕಲಬುರಗಿ: ಫಿಸಿಯೋಥೆರಪಿ ಅಥವಾ ದೈಹಿಕ ಚಿಕಿತ್ಸೆಯು ಗಾಯ, ಅನಾರೋಗ್ಯ ಅಥವಾ ಅಂಗವೈಕಲ್ಯಗಳಿಂದ ಬಳಲುತ್ತಿರುವ ವ್ಯಕ್ತಿಗಳ ದೈಹಿಕ ಕಾರ್ಯಕ್ಷಮತೆ ಚಲನ-ವಲನ ಯೋಗ ಕ್ಷೇಮವನ್ನು ಸುಧಾರಿಸಲು ವ್ಯಾಯಾಮ, ಮಸಾಜ್ ಮತ್ತು ಇತರದೈಹಿಕ ವಿಧಾನಗಳನ್ನು ಬಳಸುವದರೊಂದಿಗೆ ಔಷಧ ರಹಿತ ಒಂದು ಆರೋಗ್ಯ ರಕ್ಷಣಾ ನೀಡುವ ವಿಧಾನವಾಗಿರುವುದೇ ಫಿಸಿಯೋಥೆರಪಿ ಎಂದು ಡಾ. ಶರಣಬಸವ ಹವಲದಾರಗಂವ್ಹಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರಾಷ್ಟ್ರೀಯ ಫಿಸಿಯೋಥೆರಪಿ ದಿನಾಚರಣೆ ಹಿನ್ನಲೆ ಸ್ಟಾರ್ಕೇರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಅಂಡಗಿ ಪ್ರತಿಷ್ಠಾನ ಟೆಂಗಳಿ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೃದ್ಧರಿಗೆ ವಯಸ್ಸಾದ ಕಾರಣ ಉಂಟಾಗುವ ದೌರ್ಬಲ್ಯ ಮತ್ತು ಚಲನೆಯ ಸಮಸ್ಯೆಗಳನ್ನು ನಿವಾರಿಸಲು ಹಾಗೂ ವಿಶೇಷವಾಗಿ ಕ್ರೀಡಾಪಟುಗಳಿಗೆ ಕ್ರೀಡಾ ಸಂಬಂಧಿತ ಗಾಯಗಳನ್ನು ಗುಣಪಡಿಸಲು ಮತ್ತು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಉಪಯುಕ್ತವಾಗಿರುವ ವಿಧಾನವೇ ಫಿಸಿಯೋಥೆರಪಿ ಎಂದು ಅಂಡಗಿ ಪ್ರತಿಷ್ಠಾನ ಟೆಂಗಳಿ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಶಾಂತ ಮಾಲಿ, ಎಂ.ಎನ್. ಸುಗಂಧಿ, ಅಚಲ ರಾಜ ಅಂಡಗಿ, ಬಸವರಾಜ ಹೂಗಾರ, ಜಗನ್ನಾಥ, ಗೌತಮ, ಅಜೀಮ ಶೇಕ್, ಪ್ರದೀಪ, ಸರಿತಾ ಹಾಗೂ ಇತರರು ಉಪಸ್ಥಿತರಿದ್ದರು.