×
Ad

ಕಲಬುರಗಿ: ಅಕ್ರಮವಾಗಿ ಸಾಗಿಸುತ್ತಿದ್ದ 150 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

Update: 2024-06-12 23:34 IST

ಕಲಬುರಗಿ: ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 150 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಶಹಾಬಾದ ನಗರದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿ ವಿತರಿಸದೇ ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಡಿವೈಎಸ್‍ಪಿ ಶಂಕರಗೌಡ ಪಾಟೀಲ ಹಾಗೂ ಪಿಐ ನಟರಾಜ ಲಾಡೆ ಅವರು ವಾಹನವನ್ನು ನಗರದ ವಾಡಿ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಟ್ರಕ್ನಲ್ಲಿ ಸುಮಾರು150 ಕ್ವಿಂಟಾಲ್ ಪಡಿತರ ಅಕ್ಕಿಯ ಚೀಲವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಹಾಬಾದನ ಜುನೈದ್ ಎಂಬಾತ ಶಹಾಬಾದದಿಂದ ಉಮರ್ಗಾ ಕಡೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಉಮರ್ಗಾ ಅಕ್ಕಿ ಗೋಡಾನ ಮಾಲೀಕನ ವಿರುದ್ಧ ಶಹಬಾದ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.

ಈ ಕಾರ್ಯಚರಣೆಯಲ್ಲಿ ಪಿಎಸ್‍ಐ ಶಿವರಾಯ, ಸಿಬ್ಬಂದಿ ಗುಂಡಪ್ಪ, ಶ್ರೀಕಾಂತ್ ಉಪಳಪ್ಪ ಮತ್ತು ಆಹಾರ ಇಲಾಖೆಯ ನಿರ್ದೇಶಕರಾದ ಶ್ರೀಕಾಂತ್ ಮತ್ತು ಮಂಜು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News