×
Ad

ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಾತಿ; ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನ

Update: 2025-03-07 20:38 IST

ಕಲಬುರಗಿ : ಕಲಬುರಗಿ ಜಿಲ್ಲೆಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಇ-ಪ್ರೊಕ್ಯೂರಮೆಂಟ್ ಸಿಸ್ಟಮ್ ಅಡಿಯಲ್ಲಿ ಆಸಕ್ತಿಯುಳ್ಳವರಿಂದ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಇ-ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಬಿಡ್ ಡಾಕ್ಯುಮೆಂಟ್ ವಿತರಣೆಯು ಮಾ.10 ರಂದು ಪ್ರಾರಂಭವಾಗಲಿದ್ದು, ಯಾವುದಾದರೂ ಸ್ಪಷ್ಟೀಕರಣವನ್ನು ಸಲ್ಲಿಸಲು ಕೊನೆಯ ದಿನ ಮಾ.15 ರಂದು ಸಂಜೆ 5.30 ಗಂಟೆಯವರೆಗೆ ಇರುತ್ತದೆ. ಟೆಂಡರ್ ಅಪಲೋಡ್ ಮಾಡಲು ಕೊನೆಯ ದಿನ ಮಾ.17ರ ಸಂಜೆ 5.30 ಗಂಟೆಯವರೆಗೆ ಇರುತ್ತದೆ. ಮಾ.19 ರಂದು ಬೆಳಿಗ್ಗೆ 11 ಗಂಟೆಗೆ ತಾಂತ್ರಿಕ್ ಬಿಡ್ ಹಾಗೂ ಮಾ. 21 ರಂದು ಬೆಳಿಗ್ಗೆ 11 ಗಂಟೆಗೆ ವಾಣಿಜ್ಯ ಬಿಡ್ ತೆರೆಯಲಾಗುತ್ತದೆ.

ಟೆಂಟರ್ ಮೊತ್ತ, ಎ.ಎಂ.ಡಿ. ಮೊತ್ತ, ಟೆಂಡರ್ ತೆರೆಯುವ ಸ್ಥಳ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ಇಂಜಿನಿಯರರು, ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿ.ಯು.ಡಿ.ಸಿ), ಕೊಠಡಿ ಸಂಖ್ಯೆ 11, ಮೊದಲನೇ ಮಹಡಿ, ಮಿನಿ ವಿಧಾನಸೌಧ, ಕಲಬುರಗಿ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-278604ಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News