×
Ad

ಬುಡಕಟ್ಟು ಸಮುದಾಯದ ಪರಿಶಿಷ್ಟ ವರ್ಗಗಳು ಸರ್ಕಾರದ ಸೌಲಭ್ಯ ಪಡೆಯಬೇಕು: ಕಲಬುರಗಿ ಡಿಸಿ ಬಿ.ಫೌಝಿಯಾ ತರನ್ನುಮ್

Update: 2025-09-02 21:02 IST

ಕಲಬುರಗಿ:ಬುಡಕಟ್ಟು ಸಮುದಾಯದ ಪರಿಶಿಷ್ಟ ವರ್ಗಗಳು ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಕರೆ ನೀಡಿದರು.

ಮಂಗಳವಾರದಂದು ರಾಮಮಂದಿರ ಹತ್ತಿರವಿರುವ ಅಥರ್ವ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಜಿಲ್ಲೆ ಧರ್ತಿ ಅಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ, ಆದಿ ಕರ್ಮಯೋಗಿ ಅಭಿಯಾನ: ಪ್ರಕ್ರಿಯೆ ಪ್ರಯೋಗಾಲಯ ತಾಲ್ಲೂಕಾ ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಬಿರ್ಸಾ ಮುಂಡಾ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದರು.

ಬುಡಕಟ್ಟು ಸಮುದಾಯದ ಪರಿಶಿಷ್ಟ ವರ್ಗಗಳಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವ ಮುಖ್ಯ ಉದ್ದೇಶದಿಂದ ಆದಿ ಕರ್ಮಯೋಗಿ ಅಭಿಯಾನದ ಮುಖಾಂತರ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರತಿಯೊಬ್ಬ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದರು.

ಬುಡಕಟ್ಟು ಸಮುದಾಯದ ಪರಿಶಿಷ್ಟ ವರ್ಗಗಳು ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಉತ್ತಮ ಪಡಿಸಿಕೊಳ್ಳಲು ಭಾರತದಲ್ಲಿ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು,550 ಜಿಲ್ಲೆಗಳು ಒಂದು ಲಕ್ಷ ಗ್ರಾಮಗಳು ಮತ್ತು 3000 ಬ್ಲಾಕ್ ಗಳು ಒಳಗೊಂಡು ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈಗಾಗಲೆ ತರಬೇತಿಯನ್ನು ಪಡೆದ ಮಾಸ್ಟರ್ ಟ್ರೇನರ್ಸ್‍ಗಳಿಂದ ಐದು ಇಲಾಖೆಯ 30 ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಮೂರು ದಿನಗಳ ತರಬೇತಿ ನೀಡುವ ಮುಖ್ಯ ಉದ್ದೇಶಗಳನೇಂದರೆ ಬುಡಕಟ್ಟು ಸಮುದಾಯ ಪರಿಶಿಷ್ಟ ವರ್ಗಗಳ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ತರಲು ತರಬೇತಿ ಪಡೆದ ಅಧಿಕಾರಿಗಳು ನಾಗರಿಕರಿಗೆ ಸ್ವಯಂ ಸೇವಾ ಸಂಸ್ಥೆಯವರಿಗೆ ಯುವ ನೇತರಾರಿಗೆ ಶಿಕ್ಷಣ ತಜ್ಞರಿಗೆ ಆಧಿ ಕರ್ಮಯೋಗಿ ಅಭಿಯಾನದ ಕುರಿತು ಮತ್ತು ಬುಡಕಟ್ಟು ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತಿಳುವಳಿಕೆ ಮೂಡಿಸಲು ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಬೇಕೆಂದು ತಿಳಿಸಿದರು.

ಅಧಿ ಕರ್ಮಯೋಗಿ ಅಭಿಯಾನ ಹಾಗೂ ಬುಡಕಟ್ಟು ವ್ಯವಹಾರದ ಸಚಿವಾಲಯ ಭಾರತ ಸರ್ಕಾರ ಕಲಬುರಗಿ ಜಿಲ್ಲಾ ಪ್ರಭಾರ ಅಧಿಕಾರಿಯಾದ ಕುಂದನ ಕುಮಾರ ಮಾತನಾಡಿ, ಬುಡಕಟ್ಟು ಸಮಾಜವು ನಮ್ಮ ಸಮಾಜದಿಂದ ಅತ್ಯಂತ ವಂಚಿತ ವರ್ಗದಲ್ಲಿ ಒಂದಾಗಿದೆ ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದಿರುವುದಿಲ್ಲ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಜಗದೇವ ಜೀವನಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ನೆಲ್ಸನ್ ಮಂಡೆಲಾ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸುಭಾಷ, ಸಿ.ಎಸ್.ಒ.ಕಲಬುರಗಿ ಶಿಕ್ಷಣಾಧಿಕಾರಿ ಶಂಕರಮ್ಮ ಡವಳಗಿ, ಜೇವರ್ಗಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಸಂತೋಷ ಕುಮಾರ, ಜಿಲ್ಲಾ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಚೇತನ್ ಗುರುಕರ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News