×
Ad

ಶಹಾಬಾದ್ | ನಕಲಿ ಕೀ ಬಳಸಿ ಶಾಲೆಯಲ್ಲಿ ಕಳ್ಳತನ

Update: 2025-07-24 17:58 IST

ಕಲಬುರಗಿ: ನಕಲಿ ಕೀ ಬಳಸಿ ಕಳ್ಳತನ ಮಾಡಿರುವ ಘಟನೆ ಶಹಾಬಾದ್‌ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ನಕಲಿ ಕೀ ಬಳಸಿ, ಶಾಲೆಯ ಎರಡು ಕೋಣೆಗಳ ಬಾಗಿಲು ತೆರೆದು ತಾಂತ್ರಿಕ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದು, ಕೆಲ ದಾಖಲೆಗಳನ್ನು ಹರಿದು ಹಾಕಿದ್ದಾರೆ. ಶಾಲೆಯ ಶಿಕ್ಷಕರ ಕೋಣೆಯ ಬಾಗಿಲಿಗೆ ಹಾಕಿದ ಬೀಗವನ್ನು ನಕಲಿ ಕೀಯಿಂದ ತೆಗೆದು ಒಳಗೆ ಹೋದ ಕಳ್ಳರು ಮುಖ್ಯೋಪಾಧ್ಯಾರ ಮೇಜಿನ ಡ್ರಾನಲ್ಲಿನ ಅಲಮಾರಿಗಳ ಕೀಲಿ ತೆಗೆದು, ನಾಲ್ಕು ಅಲಮಾರಿಯಲ್ಲಿ ಸಾಮಗ್ರಿಗಳನ್ನು ಕೆಳಗೆ ಹಾಕಿದ್ದಾರೆ. ಇಲ್ಲಿರುವ ಕೆಲ ದಾಖಲೆಗಳನ್ನು ಹರಿದು ಹಾಕಿದ್ದು, ಕೆಲ ದಾಖಲೆಗಳು ಹೊತ್ತೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟು ಎರಡು ಕೋಣೆಯಲ್ಲಿದ್ದ ಎರಡು ಸಿಪಿಯು, ಎರಡು ಮೋನಿಟರ್, ಒಂದು ಕಂಪ್ಯೂಟರ್ ಕೀ ಬೋರ್ಡ್‌, ಒಂದು ಎಂಪ್ಲಿಫೈಯರ್, ಒಂದು ತೂಕದ ಯಂತ್ರ ಕಳ್ಳತನ ಮಾಡಿದ್ದಾರೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಭಾರಿ ಮುಖ್ಯಶಿಕ್ಷಕಿ ಈರಮ್ಮಾ ಅವರು ಶಹಾಬಾದ್ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸ್ಥಳಕ್ಕೆ ಪಿಐ ನಟರಾಜ ಲಾಡೆ, ಪಿಎಸ್‌ಐ ಶ್ಯಾಮರಾವ, ಪಿಸಿ, ಹುಸೇನ ಪಾಷಾ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News